ಬೆಂಗಳೂರು: ಪಟ್ಟಿಗೆ ಪಟ್ಟು.. ಸೇರಿಗೆ ಸವ್ವಾಸೇರು.. ಕಾಂಗ್ರೆಸ್ ಒಳಗೀಗ ಪವರ್ ಶೇರ್ ರಣಕಣ ನಿಲ್ಲುವ ಲಕ್ಷಣ ಇಲ್ಲ. ಈ ನಡುವೆ ಸಿಎಂ ಸಿದ್ದರಾಮಯ್ಯ ತಂತ್ರ ಬದಲಿಸಿದಂತೆ ಕಾಣ್ತಿದೆ. ಸಿದ್ದರಾಮಯ್ಯ (Siddaramaiah) ಅವರ ಫುಲ್ ಟರ್ಮ್ ಸಿಎಂ ಕ್ಲೈಮ್ ಬದಲಾಯ್ತಾ ಎಂಬ ಚರ್ಚೆಯನ್ನ ಅವರೇ ಹುಟ್ಟುಹಾಕಿದ್ದಾರೆ. ಮೈಸೂರಲ್ಲಿ ನಾನೇ 5 ವರ್ಷ ಸಿಎಂ, ನಾನೇ 17ನೇ ಬಜೆಟ್ ಮಂಡಿಸುತ್ತೇನೆ ಅಂದಿದ್ದ ಸಿಎಂ ಈಗ ಮೇಲ್ನೋಟಕ್ಕೆ ಸಾಫ್ಟ್ ಅಸ್ತ್ರ ಪ್ರಯೋಗಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಮುಂದುವರಿಯಿರಿ ಅಂದ್ರೆ ನಾನೇ ಮುಂದುವರಿಯುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ, ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ. ನಾನು ಒಪ್ಪಬೇಕು, ಡಿಕೆಶಿನೂ ಕೇಳಬೇಕು. ಹೈಕಮಾಂಡ್ ನಾನೇ ಮುಂದುವರೆಯಬೇಕು ಎಂದರೆ ನಾನೇ ಮುಂದುವರೆಯುತ್ತೇನೆ. ಎಲ್ಲವೂ ಹೈಕಮಾಂಡ್ ತೀರ್ಮಾನ ಎಂದು ಹೇಳಿದ್ದಾರೆ.ಇದನ್ನೂ ಓದಿ:ಸಿಎಂ ಹೇಳಿದ್ದೇ ವೇದವಾಕ್ಯ – ಮತ್ತೆ ಗೂಗ್ಲಿ ಎಸೆದ ಡಿಕೆಶಿ
ಇನ್ನೂ ಸಿದ್ದರಾಮಯ್ಯ ಮಾತಿಗೆ ಡಿಸಿಎಂ ಡಿಕೆಶಿ ಒಂದೇ ಸಾಲಿನಲ್ಲಿ ಮಾರ್ಮಿಕವಾಗಿ ಉತ್ತರಿಸಿ, ಅವರು ಹೇಳಿದ್ದೇ ವೇದವಾಕ್ಯ ಎಂದಷ್ಟೇ ಹೇಳಿದ್ರು. ಹೈಕಮಾಂಡ್ ಅಂಗಳಕ್ಕೆ ಫುಲ್ ಟರ್ಮ್ ಚೆಂಡೆಸೆದ ಸಿದ್ದರಾಮಯ್ಯ ಹೇಳಿಕೆ ತಂತ್ರಗಾರಿಕೆಯೋ? ದಿಕ್ಕು ಬದಲಿಸುವ ಆಟವೋ? ಖರ್ಗೆ ಕೊಟ್ಟ ಸಂದೇಶವೋ ಎಂಬುದನ್ನ ಕಾಲವೇ ನಿರ್ಧರಿಸಬೇಕಿದೆ.
