ಬೆಂಗಳೂರು: ಅಶೋಕ್ (R Ashok) ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಬಿಜೆಪಿ (BJP) ಇಳಿಸದೇ ಹೋದ್ರೆ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಅಂತ ಸಚಿವ ಎಂಬಿ ಪಾಟೀಲ್ (MB Patil) ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ 63% ಕಮೀಷನ್ ಸರ್ಕಾರ ಎಂಬ ಆರ್. ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉಪ ಲೋಕಾಯುಕ್ತರು ಹೇಳಿದ್ದು 2019 ಆಗಸ್ಟ್‌ನಲ್ಲಿ ಹೇಳಿದ್ದು.ಆರ್. ಅಶೋಕ್ ಅಂತಹವರನ್ನು ವಿಪಕ್ಷ ನಾಯಕರಾಗಿ ಇಟ್ಟುಕೊಂಡರೆ ಬಿಜೆಪಿ ತಲೆತಲಾಂತರವಾಗಿ ಸೂರ್ಯ ಚಂದ್ರ ಇರೋವರೆಗೂ ಬಿಜೆಪಿ ವಿಪಕ್ಷವಾಗಿಯೇ ಇರುತ್ತದೆ. ಅಶೋಕ್ ಅವರು ಅಜ್ಞಾನದಿಂದ ಬೇಜವಾಬ್ದಾರಿಯಿಂದ ಮಾತಾಡಿದ್ದಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಸಂಪುಟ ಪುನರ್ ರಚನೆ ಸಿಎಂ ಅಧಿಕಾರ: ಆರ್.ವಿ.ದೇಶಪಾಂಡೆ
ವಿಪಕ್ಷ ನಾಯಕ ಅಂದರೆ ಶ್ಯಾಡೋ ಸಿಎಂ ಅಂತಾರೆ. ಅಂತಹವರು 2019 ಸರ್ಕಾರದ ಬಗ್ಗೆ ಮಾತಾಡಿದ್ದನ್ನ ಈ ಸರ್ಕಾರಕ್ಕೆ ಅಂತ ಮಾತಾಡ್ತಾರೆ. ವಿಪಕ್ಷ ನಾಯಕರು ಚೆಕ್ ಮಾಡಿ ಮಾತಾಡಬೇಕು. ಮಾಹಿತಿ ಪಡೆಯದೇ ಮಾತಾಡಿ ಇಷ್ಟು ನಗೆ ಪಾಟಲಿಗೆ ಈಡಾಗಿದ್ದಾರೆ. ಬಿಜೆಪಿ ಅವರು ಎಷ್ಟು ಬೇಗ ವಿಪಕ್ಷ ನಾಯಕರನ್ನ ಬದಲಾವಣೆ ಮಾಡುತ್ತೀರೋ ಅಷ್ಟು ಒಳ್ಳೆಯದು.ಇಲ್ಲದೆ ಹೋದ್ರೆ ಶಾಶ್ವತವಾಗಿ ವಿಪಕ್ಷವಾಗಿ ಉಳಿಯಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

