ಮಂಗಳೂರು: ಒಂದು ವೇಳೆ ರಾಜ್ಯ ಸರ್ಕಾರ ಬಿದ್ದು ಹೋದರೆ ಸುಮ್ಮನೆ ಖರ್ಚು ಅಂತಾ ಐದು ವರ್ಷ ಕಾಯುವುದಕ್ಕೆ ಆಗುವುದಿಲ್ಲ. ಕಾಲ ಕಾಲಕ್ಕೆ ಚುನಾವಣೆ ಆಗಲೇ ಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಏಕಕಾಲದಲ್ಲಿ ಲೋಕಸಭೆ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುದು ಕಷ್ಟ. ಅದೆಲ್ಲ ಆಗಿ ಹೋಗೋ ವಿಚಾರವಲ್ಲ. ಸರ್ಕಾರ ಬಿದ್ದರೇ, ಮರು ಚುನಾವಣೆಗೆ ಖರ್ಚು ಮಾಡಲೇ ಬೇಕಾಗುತ್ತದೆ ಎಂದ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕುರಿತಾಗಿ ಯೋಚನೆ ನಡೆಯುತ್ತಿದೆ. ಈ ಕುರಿತು ಎರಡು ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರ ಹಂಚಿಕೆಯ ವಿಚಾರದಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
Advertisement
ವಿಧಾನಸಭೆ ಮೊಗಸಾಲೆಯಲ್ಲಿ ಅಧಿಕಾರಿಯೊಬ್ಬರು ಜನ್ಮದಿನಾಚರಣೆ ವಿಚಾರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ನಾನು ಆ ಕುರಿತು ಮಾತನಾಡುವುದಿಲ್ಲ. ಮಾಧ್ಯಮಗಳಲ್ಲಿ ಬರುವ ಸುದ್ದಿಯನ್ನು ನಂಬಲಾಗುವುದಿಲ್ಲ ಎಂದು ಮಾಜಿ ಸಿಎಂ ಗರಂ ಆದರು.