DistrictsKarnatakaKolarLatestLeading NewsMain Post

ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ

- ಗುತ್ತಿದಾರರ ಸಂಘಕ್ಕೆ ನಾಳೆ ಬೆಳಗ್ಗೆ ನೋಟಿಸ್

ಕೋಲಾರ: 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಿದರೆ ಮಾತ್ರ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯಲಾಗುವುದು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಕೋಲಾರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಹೇಳಿದಂತೆ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುತ್ತಿದ್ದೇನೆ. ಇಂದು ಭಾನುವಾರ ರಜೆಯ ದಿನವಾದ್ದರಿಂದ ನಾಳೆ ಬೆಳಗ್ಗೆ 11 ಗಂಟೆಗೆ ಮಾನನಷ್ಟ ಮೊಕದ್ದಮ್ಮೆ ಹೂಡಲಿದ್ದು, ಸಂಘದವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

ಒಂದು ವೇಳೆ ಗುತ್ತಿಗೆದಾರರು ರಾಜಿಗೆ ಬಂದ್ರೆ ಪತ್ರದ ಮೂಲಕ ಕ್ಷಮಾಪಣೆ ಪತ್ರ ನೀಡಬೇಕು. ಆರೋಪ ಮಾಡಿದವರು ಪ್ರಧಾನಿಗಳಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಬೇಕು. ಅಲ್ಲದೇ ಲೋಕಾಯುಕ್ತ ಹಾಗೂ ಗವರ್ನರ್‌ಗೆ ತಮ್ಮ ಬಳಿಯಿರುವ ದಾಖಲೆಗಳನ್ನ ನೀಡಿದ್ರೆ ಕೇಸ್ ವಾಪಸ್ ಪಡೆಯಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಇಂಡಿಯಾ- ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್‌- ಭಾರತದ ಗೆಲುವಿಗೆ ದರ್ಗಾದಲ್ಲಿ ಪ್ರಾರ್ಥನೆ 

ನೋಟಿಸ್ ಸರ್ವ್ ಮಾಡಿದ 8 ದಿನಗಳಲ್ಲಿ ದಾಖಲೆ ನೀಡಿದ್ರೆ ಗುತ್ತಿಗೆದಾರರ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನ ಮಾಡಲಾಗುವುದು. ಒಂದು ವೇಳೆ ದಾಖಲೆ ಒದಗಿಸದಿದ್ದರೆ ಮಾನನಷ್ಟ ಮೊಕದ್ದೊಮ್ಮೆ ಜೊತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಲಾರದಲ್ಲಿ ನಾನು ಹೇಳಿದಂತೆ ಕಾಮಗಾರಿಗಳನ್ನ ಪರಿಶೀಲನೆ ಮಾಡಲಾಗುವುದು. ಆಯಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಮುಂದಿನ ವಾರದಲ್ಲಿ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೇ ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ಮುಖಂಡರಿಂದ ರಾಜೀನಾಮೆಗೆ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳ ಬಳಿ ಏನಾದ್ರು ದಾಖಲೆಗಳಿದ್ದರೆ ಕೊಡಲಿ. ಅದು ಬಿಟ್ಟು ರಾಜೀನಾಮೆ ಕೇಳುವ ಹಕ್ಕು ಅವರಿಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button