ಶಿವಮೊಗ್ಗ: ರಾಷ್ಟ್ರಧ್ವಜದ ವಿಚಾರದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಈ ರೀತಿಯ ರಾಜಕಾರಣ ಮಾಡಿದರೆ, ಅವರಿಗೆ ಎಷ್ಟರ ಮಟ್ಟಿಗೆ ರಾಷ್ಟ್ರಪ್ರೇಮ ಇದೆ ಅಂತ ಅರ್ಥ ಆಗುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಬದುಕಿದ್ದರೆ, ರಾಷ್ಟ್ರಧ್ವಜವನ್ನು ಉಚಿತವಾಗಿ ಕೊಡಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸವಾಲ್ ಹಾಕಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸ್ವಾತಂತ್ರೋತ್ಸವಕ್ಕೂ, ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಸ್ವಾತಂತ್ರ‍್ಯಕ್ಕಾಗಿ ರಾಷ್ಟ್ರಭಕ್ತರು ಸಾಕಷ್ಟು ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ಆಗ ಹುಟ್ಟಿಯೇ ಇರಲಿಲ್ಲ. ಸ್ವಾತಂತ್ರ‍್ಯ ಬಂದ ನಂತರ ಸಿದ್ದರಾಮಯ್ಯ ಹುಟ್ಟಿದ್ದು. ತುರ್ತು ಪರಿಸ್ಥಿತಿ ಬರುವವರೆಗೂ ಸಿದ್ದರಾಮಯ್ಯ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದವರು. ತುರ್ತು ಪರಿಸ್ಥಿತಿ ಬಂದಾಗ ಇಂದಿರಾ ಗಾಂಧಿ ಅವರಿಗೆ ಧಿಕ್ಕಾರ ಹಾಕಿ ಜೈಲಿಗೆ ಹೋದವರು. ಜೈಲಿನಿಂದ ಹೊರ ಬಂದ ಸಂದರ್ಭದಲ್ಲೂ ಅವರಿಗೆ ರಾಷ್ಟ್ರದ ಬಗ್ಗೆ ಕಲ್ಪನೆ ಇರಲಿಲ್ಲ ಎಂದರು.
ಸಿದ್ದರಾಮಯ್ಯ ಅಧಿಕಾರದ ಆಸೆಗಾಗಿ ಬೇರೆ ಬೇರೆ ಪಕ್ಷದಲ್ಲಿದ್ದರು. ಎಲ್ಲೆಲ್ಲಿ ಅಧಿಕಾರ ಸಿಗುತ್ತದೋ ಅಲ್ಲೆಲ್ಲಾ ಹರಿದಾಡಿದರು. ಸಿದ್ದರಾಮಯ್ಯ ಸಿಕ್ಕ ಸಿಕ್ಕಾಗ ಕಾಂಗ್ರೆಸ್‌ಗೆ ಬೈಯುತ್ತಿದ್ದರು. ಈಗ ಕಾಂಗ್ರೆಸ್ ಬಗ್ಗೆ, ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ – KRSನಿಂದ ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿ
ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ರಾಷ್ಟ್ರಧ್ವಜ ಎಲ್ಲೆಲ್ಲಿ ಹಾರಿಸಬೇಕು ಅಂತ ನಮಗೆ ಗೊತ್ತಿದೆ. ಎಲ್ಲೆಲ್ಲಿ ಹಾರಿಸಬೇಕು ಎಂಬುದನ್ನು ಅವರಲ್ಲಿ ಕೇಳಿ ಹಾರಿಸಬೇಕಾ? ಅವರ ರೀತಿ ಅಧಿಕಾರಕ್ಕಾಗಿ ರಾಷ್ಟ್ರಧ್ವಜ ಬಳಸುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಕೆಶಿ ಅವರಿಂದ ರಾಷ್ಟ್ರ ಧ್ವಜದ ಬಗ್ಗೆ ಕಲಿಯುವ ಅವಶ್ಯಕತೆ ಇಲ್ಲ. ಸ್ವಾತಂತ್ರ‍್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಬೇಕು. ಆ ರೀತಿ ಆಚರಣೆ ಮಾಡುತ್ತೇವೆ. ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಸರ್ಕಾರದ ವಿರುದ್ಧ ಟೀಕೆ ಮಾಡದಿದ್ದರೆ ತಿಂದ ಅನ್ನ ಕರಗುವುದಿಲ್ಲ. ಟೀಕೆ ಮಾಡುವುದೇ ಅವರ ಕೆಲಸ, ಒಳ್ಳೆಯ ಕೆಲಸದ ಬಗ್ಗೆ ಮಾತನಾಡಿ ಅವರಿಗೆ ಗೊತ್ತೇ ಇಲ್ಲ ಎಂದರು. ಇದನ್ನೂ ಓದಿ: ಆಗಸ್ಟ್ 15 ರೊಳಗೆ ಪಕ್ಷದಲ್ಲಿ ಕೆಲ ಚೇಂಜ್ ಆಗುತ್ತದೆ- ಸಿಎಂ ಬದಲಾವಣೆಯ ಸೂಚನೆ ಕೊಟ್ಟ ಸುರೇಶ್ ಗೌಡ