ಬೆಂಗಳೂರು: ವರುಣನ ಆರ್ಭಟಕ್ಕೆ ಅರ್ಧ ಕರುನಾಡು ಜಲಮಯವಾಗಿದೆ. ಎಲ್ಲಿ ನೋಡಿದ್ರು ನೀರೋ ನೀರು. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
Advertisement
ಉಡುಪಿಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ 7 ವರ್ಷದ ಬಾಲಕಿ ಸನ್ನಿಧಿ ಶಾಲೆಯಿಂದ ಮನೆಗೆ ಮರಳುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಹಾಸನದ ಹೆಗ್ಗದ್ದೆಯಲ್ಲಿ 190 ಮಿಲಿಮೀಟರ್, ಕೊಡಗಿನ ಭಾಗಮಂಡಲದಲ್ಲಿ 182 ಮಿಲಿಮೀಟರ್ ಮಳೆ ಬಿದ್ದಿದೆ. ಕಾವೇರಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆ ಆಗ್ತಿದೆ. ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳನ್ನು ಪ್ರವಾಹ ಆವರಿಸ್ತಿದೆ. ಜನರೆಲ್ಲಾ ಮನೆ ಖಾಲಿ ಮಾಡಿದ್ದಾರೆ. ಕೆಆರ್‍ಎಸ್‍ನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿರೋದ್ರಿಂದ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
Advertisement
Advertisement
ಶ್ರೀರಂಗಪಟ್ಟಣ, ಪಾಂಡವಪುರದ 40 ಗ್ರಾಮಗಳ ಜಮೀನು ಜಲಾವೃತವಾಗ್ತಿವೆ. ಶ್ರೀರಂಗಪಟ್ಟಣದ ನಿಮಿಷಾಂಬಾದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತದಲ್ಲಿದೆ. ಆದರೂ ತಾಲೂಕಾಡಳಿತ ಯಾವುದೇ ಕ್ರಮ ತಗೊಂಡಿಲ್ಲ. ಮಹದೇವಪುರ ಗ್ರಾಮಸ್ಥರು ಅಂತ್ಯಕ್ರಿಯೆಗೂ ಪರದಾಡುವಂತಾಗಿದೆ. ಶವವನ್ನು ಪ್ರವಾಹದಲ್ಲಿಯೇ ಶವಹೊತ್ತು ಸಾಗಿದ್ದಾರೆ. ಚಿಕ್ಕಮಗಳೂರಿನ ಹೆಬ್ಬಾಳೆ ಸೇತುವೆ ಕಳೆದ ಮೂರು ದಿನದಿಂದ ಮುಳುಗಡೆ ಸ್ಥಿತಿಯಲ್ಲಿಯೇ ಇದೆ. ಅಪಾಯ ಲೆಕ್ಕಿಸದೇ ಕೆಎಸ್‍ಆರ್‍ಟಿಸಿ ಬಸ್ ಸೇತುವೆ ದಾಟಿದೆ. ಕಳಸ ಬಳಿಯ ನೆಲ್ಲಿಬೀಡು ಬಳಿ ರಾಜ್ಯ ಹೆದ್ದಾರಿ ನದಿಯಂತಾಗಿದೆ.
Advertisement
ಶಿವಮೊಗ್ಗದ ಪುರದಾಳ್ ಚೆಕ್‍ಡ್ಯಾಂ ತುಂಬಿ ಹರಿದಿದೆ. ಮಳೆಯಿಂದ ನಮ್ಮೂರ್‍ಗೆ ರಸ್ತೆಯಿಲ್ಲ. ಕರೆಂಟ್ ಇಲ್ಲ ಡಿಸಿ ಅಂಕಲ್.. ಪ್ಲೀಸ್ ಕಲ್ಪಿಸಿ ಎಂದು ಕಾರ್ಗಲ್ ಸಮೀಪದ ಉರುಳುಗಲ್ ಗ್ರಾಮದ ಪುಟ್ಟ ಬಾಲಕಿ ಸಾನ್ವಿ ಮನವಿ ಮಾಡಿದ್ದಾಳೆ. ಹಾಸನದ ರಾಮನಾಥಪುರ ರಸ್ತೆ ಕೊಚ್ಚಿ ಹೋಗಿದೆ. ಸಕಲೇಶಪುರದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಮನಗರದ ಗದಗಯ್ಯನದೊಡ್ಡಿ ಸೇತುವೆ ಸಂಪೂರ್ಣ ಕೊಚ್ಚಿಹೋಗಿದೆ. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಅಶ್ವಥ್‍ನಾರಾಯಣ್ ಭಾರೀ ಆಕ್ರೋಶ ಎದುರಿಸಿದ್ದಾರೆ.
ತುಮಕೂರಿನ ಯಾಲದಹಳ್ಳಿಯಲ್ಲಿ ಕೋಳಿ ಶೆಡ್ ಕುಸಿದು ಸಾವಿರಾರು ಕೋಳಿ ಸಾವನ್ನಪ್ಪಿವೆ. ಕಾರವಾರದಲ್ಲಿ ಕಡೆಲ್ಕೊರೆತಕ್ಕೆ ತಡೆಗೋಡೆ ಕೊಚ್ಚಿಹೋಗಿದೆ. ಹೊನ್ನಾವರದ ಅಪ್ಸರಕೊಂಡದಲ್ಲಿ ಭೂಕುಸಿತದ ಆತಂಕ ಎದುರಾಗಿದ್ದು, 12 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ದಕ್ಷಿಣ ಕನ್ನಡದ ಸಮುದ್ರ ಪ್ರಕ್ಷುಬ್ಧಗೊಂಡಿರುವ ಕಾರಣ ಆಗಸ್ಟ್ 11ರವರೆಗೆ ಮೀನುಗಾರಿಕೆ ಬಂದ್ ಮಾಡಲಾಗಿದೆ. ಇದನ್ನೂ ಓದಿ: ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ವಿಜಯೇಂದ್ರ
ಇತ್ತ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗ್ತಿದೆ. ಒಂದೇ ವರ್ಷದಲ್ಲಿ ಮೂರು ಸಾರಿ ಟಿಬಿ ಜಲಾಶಯ ತುಂಬಿದ್ದು, ಡ್ಯಾಂನಿಂದ ಅಪಾರ ನೀರು ಹೊರಬಿಡಲಾಗ್ತಿದೆ. ಪರಿಣಾಮ ಹಂಪಿಯ ಬಹುತೇಕ ಸ್ಮಾರಕಗಳು ಮುಳುಗಡೆ ಆಗಿವೆ. ಅಪಾಯದ ಮಟ್ಟ ಮೀರಿದ ನದಿಯಲ್ಲಿ ಕೆಲವರು ಮುಳುಗೇಳುವ ಸಾಹಸ ಮಾಡ್ತಿದ್ದಾತೆ. ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಬಂದ್ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ.
ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಿಂಗಳಾಪುರ ಸೇತುವೆ ಮೇಲೆ ನೀರು ಪ್ರವಹಿಸ್ತಾ ಇದೆ. ಹಲವು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದೆ. ಬೆಳಗಾವಿಯ ಶ್ರೀನಗರ, ಜಯನಗರ ಸೇರಿ ಹಲವು ಬಡಾವಣೆಗಳು ಜಲಮಯವಾಗಿವೆ. ಆಸ್ಪತ್ರೆ, ಮೆಡಿಕಲ್ ಶಾಪ್‍ಗೂ ನೀರು ನುಗ್ಗಿದೆ. ರಸ್ತೆಗಳಲ್ಲಿ ಎರಡು ಅಡಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಶಹಾಪುರದಲ್ಲಿ ಅನಗೋಳದಲ್ಲಿ ಹಲವು ಮನೆ ಕುಸಿದಿವೆ. ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಬೆಳಗಾವಿಯ ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾವಿರಾರು ಎಕರೆ ಹೊಲ ತೋಟಗಳು ಮುಳುಗಡೆ ಆಗಿವೆ. ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಸೂಕ್ತ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು, ಮಳೆ, bengaluru, rain