ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಧಮ್ ಇದ್ದರೆ ಸಿದ್ದರಾಮಯ್ಯನ (Siddaramaiah) ಮೇಲೆ ಮಾಡಿರುವ ಆರೋಪಗಳನ್ನು ತನಿಖೆಗೆ ಒಳಪಡಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದಾರೆ.
Advertisement
ಮೈಸೂರಿನಲ್ಲಿ ಜೆಡಿಎಸ್ (JDS) ಸಂಘಟನಾ ಕಾರ್ಯಾಗಾರ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ (Rahul Gandhi) ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳ ಫೈಲ್ ಯಾಕೆ ಕಳುಹಿಸುತ್ತೀರಿ? ನೀವೇ ಅದನ್ನು ಕ್ಯಾಬಿನೆಟ್ ನಲ್ಲಿಟ್ಟು ತನಿಖೆ ಮಾಡಿಸಿ. ಅದನ್ನು ರಾಹುಲ್ ಗಾಂಧಿಗೆ ಕಳುಹಿಸಿ ಏನ್ ಮಾಡ್ತೀರಾ? ನೀನು ಅತ್ತಂಗೆ ಮಾಡು ನಾನು ಹೊಡೆದ್ಹಂಗೆ ಮಾಡ್ತಿನಿ ಅನ್ನೋ ಥರದ ಮಾತು ಇದು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – ಕಾಂಗ್ರೆಸ್, ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Advertisement
Advertisement
ಕನ್ನಡ ರಾಜ್ಯೋತ್ಸವ ದಿನ ಜೆಡಿಎಸ್‌ನ `ಪಂಚ ರತ್ನ’ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಕೋಲಾರದ ಮುಳುಬಾಗಿಲಿನಿಂದ ಆರಂಭವಾಗಿ ಪ್ರತಿ ದಿನವೂ ಒಂದು ತಾಲೂಕಿನ ಒಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಮೊದಲ ಹಂತದಲ್ಲಿ 35 ವಿಧಾನಸಭೆಗೆ ಭೇಟಿ ನೀಡಿ, ನವೆಂಬರ್ 1 ರಿಂದ ಡಿಸೆಂಬರ್ 5ರ ವರೆಗೆ ಮೊದಲ ಹಂತದ ಪಂಚ ರತ್ನ ರಥ ಯಾತ್ರೆ ನಡೆಸುತ್ತೇನೆ. ಬಹಳ ಜನ ಜೆಡಿಎಸ್ ಎಲ್ಲಿದೆ? 15 – 20 ಸ್ಥಾನ ಗೆಲ್ಲಬಹುದು ಅಂತಾರೆ. ಆದರೆ, ಜನ ನಮ್ಮ ಪರ ಇದ್ದಾರೆ. ಮಿಷನ್-123 ಯಶಸ್ವಿಯಾಗುತ್ತದೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಒಂದು ಕ್ಷೇತ್ರವಿಲ್ಲ. ಆದ್ರೆ ನಮಗೆ ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳಿದ್ದಾರೆ. ಅವಕಾಶವಾದಿಗಳಿಗೆ ನನ್ನ ಬೆಂಬಲ ಇಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.
Advertisement
ಜಿಟಿಡಿ ನೇತೃತ್ವದಲ್ಲೇ ಪಂಚರತ್ನ ಯಾತ್ರೆ:
ಮಾಜಿ ಸಚಿವ ಜಿ.ಟಿ.ದೇವೇಗೌಡ (GT Devegowda) ಅವರೊಂದಿಗೆ ಮಾತನಾಡಿದ್ದೇವೆ. ಯಾವ ಸಮಸ್ಯೆಯೂ ಇಲ್ಲ. ಎಲ್ಲಾ ಗೊಂದಲವೂ ಬಗೆಹರಿದಿದೆ. ಜಿಟಿಡಿ ನೇತೃತ್ವದಲ್ಲೇ ಮೈಸೂರು ಭಾಗದಲ್ಲಿ 2ನೇ ಹಂತದ ಪಂಚರತ್ನ ಯಾತ್ರೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್- ಮಠದ ಹಾಸ್ಟೆಲ್‍ನಲ್ಲಿ ಇಬ್ಬರು ಬಾಲಕಿಯರು ಪತ್ತೆ
ಸಿದ್ದು-ಡಿಕೆಶಿ ಜೋಡೋ ಯಶಸ್ವಿಯಾಗಲ್ಲ:
ಭಾರತ್ ಜೋಡೋ ಯಾತ್ರೆ (Bharat Jodo Yatra) ಕುರಿತು ಮಾತನಾಡಿ, ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿದ್ದು ಭಾರತ್ ಜೋಡೋಗೆ ಅಲ್ಲ. ಡಿಕೆಶಿ (Dk Shivakumar) – ಸಿದ್ದರಾಮಯ್ಯ ಜೋಡೋಗೆ. ರಾಹುಲ್ ಗಾಂಧಿ ಯಾತ್ರೆಗೂ ಕನ್ನಡಿಗರಿಗೂ ಸಂಬಂಧ ಇಲ್ಲ. ಡಿಕೆಶಿ – ಸಿದ್ದರಾಮಯ್ಯ ಜೋಡಿಸುವ ರಾಹುಲ್ ಪ್ರಯತ್ನ ಯಾವತ್ತಿಗೂ ಯಶಸ್ವಿಯಾಗಲ್ಲ ಎಂದು ಟೀಕಿಸಿದ್ದಾರೆ.