ವಾಷಿಂಗ್ಟನ್: ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡಲು ಶುರುಮಾಡಿದ ಟೆಸ್ಲಾ (Tesla) ಮುಖ್ಯಸ್ಥ ಹಾಗೂ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಇದೀಗ ಗುಜರಾತ್ ಗಲಭೆ, ಪ್ರಧಾನಿ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರ (BBC Documentary) ಪ್ರಸಾರದಲ್ಲಿ ಟ್ವಿಟ್ಟರ್ ಪಾತ್ರದ ಕುರಿತು ಮಾತನಾಡಿದ್ದಾರೆ.
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಟ್ವಿಟರ್ ವೇದಿಕೆಯಲ್ಲಿ ಲೈವ್ ಪ್ರಸಾರ ಮಾಡಿದ್ದರಿಂದ, ಭಾರತ ಸರ್ಕಾರದ ಆದೇಶದ ಮೇರೆಗೆ ಸೈಟ್ ಕೆಲವು ವಿಷಯವನ್ನು ತೆಗೆದುಹಾಕಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಸ್ಕ್, ನನಗೆ ಈ ನಿರ್ದಿಷ್ಟ ಸನ್ನಿವೇಶದ ಬಗ್ಗೆ ತಿಳಿದಿಲ್ಲ. ಭಾರತದಲ್ಲಿನ ಕೆಲವು ವಿಷಯಗಳಲ್ಲಿ ಪರಿಸ್ಥಿತಿ ನಿಖರವಾಗಿ ಏನಾಯಿತು ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!
Advertisement
Advertisement
2002ರ ಗುಜರಾತ್ ಗಲಭೆ (Gujarat Riots) ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿದ್ದ `India: The Modi Question’ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ಬ್ಯಾನ್ ಮಾಡಿದ್ದು ಅದರ ಲಿಂಕ್‌ಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿತ್ತು. ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅಡಿಯಲ್ಲಿ ತುರ್ತು ಅಧಿಕಾರ ಬಳಸಿಕೊಂಡು ಲಿಂಕ್‌ಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ನೀಡಿದ್ದು ಟ್ವಿಟ್ಟರ್ ಮತ್ತು ಯೂಟ್ಯೂಬ್ ಈ ಆದೇಶ ಪಾಲನೆ ಮಾಡಲು ಒಪ್ಪಿಕೊಂಡಿದ್ದವು.
Advertisement
Advertisement
ಭಾರತದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನ ಬ್ಯಾನ್ ಮಾಡಿದ್ದರೂ, ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ವೀಡಿಯೋಗಳನ್ನ ಅಪ್‌ಲೋಡ್ ಮಾಡಲಾಗಿತ್ತು. ಆದ್ದರಿಂದ ಸಾಕ್ಷ್ಯಚಿತ್ರದ ವೀಡಿಯೋಗಳನ್ನು ಲಿಂಕ್ ಮಾಡುವ 50ಕ್ಕೂ ಹೆಚ್ಚು ಟ್ವಿಟ್ಟರ್ ಖಾತೆಗಳನ್ನ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಆದೇಶಿಸಿತು ಎಂದು ಸರ್ಕಾರದ ಸಲಹೆಗಾರ ಕಾಂಚನ್‌ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ
ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಮಸ್ಕ್, ಸಾಮಾಜಿಕ ಮಾಧ್ಯಮ ವಿಚಾರದಲ್ಲಿ ಭಾರತ ಸರ್ಕಾರದ ನಿಯಮಗಳು ಕಟ್ಟುನಿಟ್ಟಾಗಿವೆ. ನಾವು ಯಾವುದೇ ಕಾರಣಕ್ಕೂ ದೇಶದ ಕಾನೂನುಗಳನ್ನ ಮೀರಿ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಜನರು ಜೈಲಿಗೆ ಹೋಗ್ತೀರಾ? ಅಥವಾ ಕಾನೂನು ಪಾಲನೆ ಮಾಡ್ತೀರಾ? ಎಂಬ ಆಯ್ಕೆಗಳನ್ನ ನೀಡಿದ್ರೆ, ನಾವು ಕಾನೂನು ಪಾಲನೆ ಮಾಡುವ ಆಯ್ಕೆಯನ್ನೇ ಅನುಸರಿಸುತ್ತೇವೆ ಎಂದು ಭಾರತ ಕಾನೂನಿನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.