ಮುಂಬೈ: ಹನುಮಾನ್ ಚಾಲೀಸಾ ಪಠಿಸುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಸಂಸದೆ ನವನೀತ್ ರಾಣಾ ಹಾಗೂ ಶಾಸಕ ರವಿ ರಾಣಾ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ರಾಜ್ಯ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದೆ ಹಾಗೂ ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದರು.
ರಾಣಾ ದಂಪತಿ ಹನುಮಾನ್ ಚಾಲೀಸಾವನ್ನು ಪಠಿಸಬೇಕು ಎಂದಿದ್ದರು. ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಅಥವಾ ಏನನ್ನೂ ಹೇಳಿರಲಿಲ್ಲ. ಹನುಮಾನ್ ಚಾಲೀಸಾವನ್ನು ಇನ್ನೆಲ್ಲಿ ಓದಬೇಕು? ಪಾಕಿಸ್ತಾನದಲ್ಲಿಯೇ? ಎಂದು ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿ ಶಾಲೆಯ ತರಗತಿಯಲ್ಲಿ ಹಾಜರಾಗಿ ಪಾಠ ಕೇಳಿದ ಕೇಜ್ರಿವಾಲ್, ಭಗವಂತ್ ಮಾನ್
Advertisement
Advertisement
ಹನುಮಾನ್ ಚಾಲೀಸಾ ಪಠಿಸುವುದು ದೇಶವಿರೋಧಿಯೇ? ಒಂದು ವೇಳೆ ಇದು ದೇಶ ವಿರೋಧಿಯಾದಲ್ಲಿ ಸರ್ಕಾರ ನಮ್ಮೆಲ್ಲರ ಮೇಲೆಯೂ ದೇಶದ್ರೋಹ ಆರೋಪ ಹೊರಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಿಂದುತ್ವ ಸಿದ್ಧಾಂತವು ಸಂಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ: ಶಿವಸೇನೆ
Advertisement
ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ವಿಷಯದಲ್ಲಿ ಟೀಕೆ ಹಾಗೂ ದ್ವೇಷ ಪ್ರಚೋದನಾ ಕೃತ್ಯಕ್ಕೆ ಸಂಬಂಧಿಸಿದಂತೆ ನವನೀತ್ ರಾಣಾ ಹಾಗೂ ಅವರ ಪತಿ ರವಿ ರಾಣಾರನ್ನು ಭಾನುವಾರ 14 ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಇದೇ ವೇಳೆ ಹನುಮಾನ್ ಚಾಲೀಸಾ ಪಠಿಸುವ ವಿಚಾರವಾಗಿ ದಂಪತಿ ನಿವಾಸದ ಹೊರಗಡೆ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ 6 ಮಂದಿ ಶಿವಸೇನಾ ಕಾರ್ಯಕರ್ತರನ್ನು ಬಂಧಿಸಲಾಗಿದೆ.