LatestMain PostNational

ಹಿಂದುತ್ವ ಸಿದ್ಧಾಂತವು ಸಂ‌ಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ: ಶಿವಸೇನೆ

ಮುಂಬೈ: ಹಿಂದುತ್ವ ಸಿದ್ಧಾಂತವು ಸಂ‌ಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ ಎಂದು ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.

ಹನುಮಾನ್ ಚಾಲೀಸಾ ಪಠಣದ ಕುರಿತು ಮಹಾರಾಷ್ಟ್ರದಲ್ಲಿ ಎದ್ದಿರುವ ರಾಜಕೀಯ ಗದ್ದಲದ ಕುರಿತು ಶಿವಸೇನೆ ಪ್ರತಿಕ್ರಿಯಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಿದ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರು ಈ ಹಿಂದೆ ಮಾಡಿದ ಕರೆ ಹಿಂದೆ ಬಿಜೆಪಿಯ ಕೊಳೆತ ಮೆದುಳು ಎಂದು ಶಿವಸೇನೆ ಆರೋಪಿಸಿದೆ.

v

ರಾಣಾ ದಂಪತಿಗಳು ನಗರದ ವಾತಾವರಣವನ್ನು ಹಾಳು ಮಾಡಲು ಬಯಸಿದ್ದಾರೆ. ಅವರು ಈ ಕಾರ್ಯಕ್ರಮವನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಲಾಬಿಯಲ್ಲಿ ನಡೆಸಬೇಕು ಎಂದು ಹೇಳಿದೆ. ಇದನ್ನೂ ಓದಿ: FDA ನೇಮಕಾತಿಯಲ್ಲೂ ಅಕ್ರಮ- ಒಂದೇ ತಾಲೂಕಿನ 202 ಮಂದಿ ಆಯ್ಕೆ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಹಿಂದುತ್ವ ಉತ್ತಮವಾಗಿದೆ. ರಾಜ್ಯದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ, ಆದರೆ ಸಿಎಂ ನಿವಾಸದ ಹೊರಗೆ ಪಠಿಸಬೇಕೆಂಬ ಒತ್ತಾಯ ಏಕೆ? ಎಂದಿದೆ.

ಬಿಜೆಪಿ ನಡೆಸುತ್ತಿರುವ ಅವ್ಯವಸ್ಥೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಹಿಂದುತ್ವ ಎಂಬುದು ಒಂದು ಸಂಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ ಎಂದು ಹೇಳಿದೆ. ಇದನ್ನೂ ಓದಿ: ಸರ್ಕಾರ ಕತ್ತೆ ಕಾಯ್ತಿದ್ಯಾ? ಕಡ್ಲೆಪುರಿ ತಿಂತಿದ್ಯಾ? ಆರೋಪಿ ವಿರುದ್ಧ FIR ದಾಖಲಿಸಿಲ್ಲ ಯಾಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ

Leave a Reply

Your email address will not be published.

Back to top button