ವಿಜಯಪುರ: ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪರ್ಧಿಸಿದರೆ ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇನೆ ಎಂದು ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಮುಂದೇ ರಾಜ್ಯದ ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪನವರು ವಿಜಯಪುರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಪಾಲಿಗೆ ಸೌಭಾಗ್ಯ ಸಿಗಲಿದೆ ಎಂದು ಹೇಳಿದರು.
Advertisement
ಅಷ್ಟೇ ಅಲ್ಲದೇ ಯಡಿಯೂರಪ್ಪ ಅವರು ವಿಜಯಪುರ ನಗರದಿಂದ ಬಿಟ್ಟು ಜಿಲ್ಲೆಯ ಬೇರೆ ಯಾವುದೇ ಮತಕ್ಷೇತ್ರದಿಂದ ಸ್ಪರ್ಧಿಸಿದರೂ ನಾನು ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ತರುತ್ತೇನೆ. ಆದರೆ ನಾನು ಬಿಜೆಪಿ ಸೇರದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
Advertisement
ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ – ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣು ಹಾಕಿರುವ ಬಿಜೆಪಿ ಯಡಿಯೂರಪ್ಪ ಅವರನ್ನು ಈ ಭಾಗದಿಂದ ಕಣಕ್ಕೆ ಇಳಿಸಲು ಮುಂದಾಗುತ್ತಿದೆ. ಹೀಗಾಗಿ ಸೋಮವಾರದಿಂದ ಬಿಎಸ್‍ವೈ ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಜೋರು ಚರ್ಚೆ ನಡೆಯುತ್ತಿದೆ.
Advertisement
ಇದನ್ನೂ ಓದಿ: ಒಂದೇ ಏಟಿಗೆ ಎರಡ್ಹಕ್ಕಿ ಹೊಡೆದ ಚಾಣಕ್ಯ-ಲಿಂಗಾಯತ ಮತವೂ ಅಬಾಧಿತ, ಬಿಎಸ್‍ವೈಯೂ ದುರ್ಬಲ!