ಮಂಡ್ಯ: ದೇಶದಲ್ಲಿ ಒಂದೇ ಅವಧಿಯಲ್ಲಿ ಒಬ್ಬ ಎರಡು ಅಸೆಂಬ್ಲಿ, ಎರಡು ಎಂಪಿ ಚುನಾವಣೆ ಮಾಡಿರೋದು ಇದ್ದರೆ ಅದು ನಾನು ಒಬ್ಬನೇ ಎಂದು ಮಾಜಿ ಸಚಿವ, ಮೇಲುಕೋಟೆ ಜೆಡಿಎಸ್ (JDS) ಅಭ್ಯರ್ಥಿ ಸಿ.ಎಸ್ ಪುಟ್ಟರಾಜು (CS Puttaraju) ಹೇಳಿದರು.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆ ಮಾಡೋದರಲ್ಲಿ ಪಿಹೆಚ್‍ಡಿ ಮಾಡಿಬಿಟ್ಟಿದ್ದೇನೆ. ರಾಜಕಾರಣದಲ್ಲಿ 40 ವರ್ಷ ಸರ್ವಿಸ್ ಆಗಿದೆ. ಪಿಹೆಚ್‍ಡಿ ಆಗಿದೆ ಎಂದರು. ಇದನ್ನೂ ಓದಿ: ಯಾರ ಹೆಂಡತಿ ಪತಿವ್ರತೆನೋ ಅವರೆಲ್ಲ BJPಗೆ ವೋಟ್ ಹಾಕ್ತಾರೆ – ಬಜರಂಗದಳ ಕಾರ್ಯಕರ್ತನ ವಾಟ್ಸಪ್ ಸ್ಟೇಟಸ್ ರಾದ್ಧಾಂತ
Advertisement
ರೈತ ಸಂಘಕ್ಕೆ ಸೋಲಿನ ಹತಾಷೆ ಎದುರಾಗಿದೆ. ನಾನು ಸೋಲು-ಗೆಲುವು ನೋಡಿರುವವನು, ನನಗೆ ಭಯನೇ ಇಲ್ಲ. ಈ ಚುನಾವಣೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಅತ್ಯಂತ ಬಹುಮತದಲ್ಲಿ ನನ್ನನ್ನು ಗೆಲುವು ತಂದುಕೊಡುತ್ತೆ. ಈಗಾಗಲೇ ತೀರ್ಮಾನವಾಗಿ ಬೂತ್ ನಲ್ಲಿದೆ ಎಂದು ಹೇಳಿದರು.
Advertisement
Advertisement
ನನಗೆ ಸೋಲಿನ ಹತಾಶೆನೇ ಇಲ್ಲ. ಒಂದು ಅವಧಿಯಲ್ಲಿ ಎರಡು ಸಲ ಸೋತಿದ್ದೀನಿ, ಎರಡು ಸಲ ಗೆದ್ದಿದ್ದೀನಿ. ಈ ದೇಶದಲ್ಲಿ ಯಾವನಾರು ಒಬ್ಬ ಎರಡು ಅಸೆಂಬ್ಲಿ ಚುನಾವಣೆ, ಎರಡು ಎಂಪಿ ಚುನಾವಣೆ ಮಾಡಿರೋ ಗಂಡು ಯಾರಾದ್ರು ಇದ್ರೆ ಪುಟ್ಟರಾಜು ಒಬ್ಬನೇ. ಅದರ ಭಯನೇ ಇಲ್ಲ. ನೂರಕ್ಕೆ ನೂರರಷ್ಟು ಈ ಬಾರಿ ಗೆಲ್ತೇನೆ. ಕನಿಷ್ಟ 25 ಸಾವಿರ ಲೀಡ್ ನಲ್ಲಿ ಗೆಲ್ತೇನೆ. ನನ್ನ ಲೀಡ್ ಬಹಳ ಮುಂದೆ ಹೋಗುತ್ತೆ ಎಂದರು.