ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮತದಾನ ಬುಧವಾರ ಮುಕ್ತಾಯಗೊಂಡಿದೆ. ಆದರೂ ವಿವಾದ, ಒಳಜಗಳಗಳ ಕಾವು ಇನ್ನೂ ಇದೆ. ಮತದಾನ ವಿಚಾರವಾಗಿ ಬಜರಂಗದಳ (Bajrang Dal) ಕಾರ್ಯಕರ್ತನೊಬ್ಬ ಹಾಕಿದ ವಾಟ್ಸಪ್ ಸ್ಟೇಟಸ್ ಗ್ರಾಮದಲ್ಲಿ ರಾದ್ಧಾಂತ ಸೃಷ್ಟಿಸಿದೆ. ಚುನಾವಣೆ ಮುಗಿದರೂ ವಿವಾದ ಬಗೆಹರಿದಿಲ್ಲ.
Advertisement
ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ವಿವಾದ ಸೃಷ್ಟಿಸಿದ ಬಜರಂಗದಳ ಕಾರ್ಯಕರ್ತ. ಈತ ಮತದಾನದ ದಿನ, “ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕ್ತಾರೆ” ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ. ಇದು ವಿಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಕೆರಳಿಸಿದೆ. ಇದನ್ನೂ ಓದಿ: ಕಿಡ್ನಿ ಸಮಸ್ಯೆ – ಸಿ.ಟಿ ರವಿ ಆಸ್ಪತ್ರೆಗೆ ದಾಖಲು
Advertisement
Advertisement
ಸ್ಟೇಟಸ್ ನೋಡಿ ರೊಚ್ಚಿಗೆದ್ದ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕಾರ್ತಿಕ್‌ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
Advertisement
ಮೇ 10 ರಾಜ್ಯಾದ್ಯಂತ ಮತದಾನ ನಡೆಯಿತು. ಹಲವೆಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷಗಳ ಪರ ಜನರಿಂದ ಮತ ಹಾಕಿಸಲು ಕೊನೆವರೆಗೂ ಕಸರತ್ತು ನಡೆಸಿದರು. ಇದರ ನಡುವೆ ಕೆಲವೆಡೆ ಗಲಾಟೆಗಳು ನಡೆದವು. ಈ ಎಲ್ಲ ಬೆಳವಣಿಗೆಗಳ ನಡುವೆ ಚುನಾವಣೆಯು ಸಾಂಗವಾಗಿ ನೆರವೇರಿತು. ಇದನ್ನೂ ಓದಿ: ಬೆಂಗಳೂರಲ್ಲಿ ತಗ್ಗಿದ ಮತದಾನ ಪ್ರಮಾಣ – ನಗರ ಜನತೆ ನಿರುತ್ಸಾಹ; ಕಾರಣ ಏನು?