ಕೊಪ್ಪಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಅಧಿಕಾರಿ ಡಿ ಗ್ರೂಪ್ ಮಹಿಳಾ ನೌಕರರು ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ ಎಂದು ಕರೆಯುತ್ತಾನೆ ಎಂದು ನೌಕರರು ಸಾಕ್ಷಿ ಸಮೇತ ದೂರು ನೀಡಿದ್ದಾರೆ.
Advertisement
ಡಿವೈಎಸ್‌ಪಿ ರ‍್ಯಾಂಕ್‌ನ ಸಹಾಯಕ ಆಡಳಿತಾಧಿಕಾರಿ ಮಲ್ಲಿನಾಥ್ ಕಚೇರಿಯ ಡಿ ಗ್ರೂಪ್ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪ ಕೇಳಿಬಂದಿದೆ. ಅನುಕಂಪದ ಆಧಾರದಡಿ ಕೆಲಸಕ್ಕೆ ಸೇರಿರೋ ವಿಧವಾ ಮಹಿಳಾ ನೌಕರರೇ ಇತನಿಗೆ ಟಾರ್ಗೆಟ್ ಎಂದು ನೊಂದ ಮಹಿಳೆಯರು ಎಸ್‌ಪಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK
Advertisement
Advertisement
ಮಹಿಳಾ ನೌಕರರು ರಜೆ ಸೇರಿ ಇತರೇ ಸೌಲಭ್ಯ ಬೇಕು ಎಂದರೂ ಲಾಡ್ಜಗೆ ಬಂದು ಬಟ್ಟೆ ಬಿಚ್ಚಬೇಕು ಎಂದು ಮಲ್ಲಿನಾಥ್ ಹೇಳುತ್ತಾನೆ ಎಂದು ಮಹಿಳೆಯರು ಕಷ್ಟ ಹೇಳಿಕೊಂಡಿದ್ದಾರೆ. ಅಲ್ಲದೇ ಎಸ್‌ಪಿ ಕಚೇರಿಯಲ್ಲೇ ಸ್ವಚ್ಛತಾ ಕೆಲಸಕ್ಕೆ ಬರುವ ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು ಎಳೆದು ಕೊಂಡು ಚುಂಬಿಸುವ ಮತ್ತು ಅಸಭ್ಯವಾಗಿ ವರ್ತಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ನ್ಯೂಜಿಲೆಂಡ್‍ನ ಸಹಕಾರ ಕೇಳಿದ ಬೈಡನ್
Advertisement
ಈ ದೃಶ್ಯಗಳ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿರೋ ನೊಂದ ಮಹಿಳೆಯರು ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಳೆದ 2019ರಲ್ಲೇ ಇಬ್ಬರು ಮಹಿಳಾ ಸಿಬ್ಬಂದಿ ಈತನ ವಿರುದ್ಧ ದೂರು ನೀಡಿದ್ದಾರೆ. ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಕಿಸ್ ಮಾಡುವ ಸಿಸಿಟಿವಿ ಕ್ಯಾಮೆರಾ ಪುಟೇಜ್ ಸಹಿತ ದೂರು ನೀಡಿದ್ದು, ಆಗಿನ ಡಿವೈಎಸ್‌ಪಿ ವೆಂಕಟಪ್ಪ ನಾಯಕ ತನಿಖೆ ಮಾಡಿ ವರದಿ ನೀಡಿದ್ದಾರೆ.
ಕೊಪ್ಪಳ ಎಸ್‌ಪಿ ಕಚೇರಿಯಲ್ಲಿನ ಎಲ್ಲ ಡಿ ಗ್ರೂಪ್ ನೌಕರರನ್ನು ತನಿಖೆಗೆ ಒಳಪಡಿಸಲಾಗಿದ್ದು, ದೂರು ಪ್ರತಿಯಲ್ಲಿ ಹೆಸರು ಇರುವ ರೇಣುಕಮ್ಮ ಮತ್ತು ರೇಖಾ ಕೂಡ ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಂತರವೂ ಕೆಲ ಮಹಿಳಾ ಸಿಬ್ಬಂದಿಗೆ ಕಿರುಕುಳ ಮುಂದುವರಿದಿದೆ. ಈ ಹಿನ್ನೆಲೆ ಮಲ್ಲಿನಾಥ್‌ನ ಕಾಟಕ್ಕೆ ಬೇಸತ್ತು ಇದೀಗ ದೂರು ಪ್ರತಿ ಮತ್ತು ಸಿಸಿಟಿವಿ ಕ್ಯಾಮೆರಾ ಫುಟೇಜ್‌ಗಳನ್ನು ಮಹಿಳಾ ನೌಕರರು ಮಾಧ್ಯಮಗಳಿಗೆ ತಲುಪಿಸಿದ್ದಾರೆ. ಈ ಎಲ್ಲ ಆರೋಪಗಳನ್ನು ಮಲ್ಲಿನಾಥ್ ಅಲ್ಲಗಳೆದಿದ್ದಾನೆ.
ಡಿವೈಎಸ್‌ಪಿ ರ‍್ಯಾಂಕ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಆತನನ್ನು ಅಮಾನತು ಮಾಡಿ. ತನಿಖೆ ಮಾಡಿದ್ರೆ ಮಾತ್ರ ಕೆಳ ಹಂತದ ನೌಕರರು ಸತ್ಯ ಬಾಯಿಬಿಡಲು ಸಾಧ್ಯ. ಆದರೆ ಖಡಕ್ ನಿರ್ಧಾರಕ್ಕೆ ಯಾವೊಬ್ಬ ಅಧಿಕಾರಿಯೂ ಮುಂದಾಗದಿರುವುದು ನೊಂದ ಮಹಿಳೆಯರಲ್ಲಿ ನ್ಯಾಯ ಸಿಗುವ ಆಸೆ ಕಮರಿದೆ.