InternationalLatestLeading NewsMain Post

ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK

ಲಂಡನ್: ಮಂಕಿಪಾಕ್ಸ್ ರೋಗ ನಿಯಂತ್ರಣ ಮಾಡಬೇಕಾದರೆ ಸೋಂಕಿನ ಲಕ್ಷಣ ಇರುವವರೊಂದಿಗೆ ಸೆಕ್ಸ್ ಮಾಡುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸಬೇಕು ಎಂದು ಇಂಗ್ಲೆಂಡ್‌ನ ಆರೋಗ್ಯ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಗ್ಲೆಂಡ್ ಕಳದೆ ಒಂದೇ ವಾರದಲ್ಲಿ 71 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಒಟ್ಟು 55 ಪ್ರಕರಣಗಳಿರುವುದು ಕಂಡುಬಂದಿದೆ. ಇದರಿಂದ ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ವೆಲ್ಸ್ ಗಳ ಆರೋಗ್ಯ ಪ್ರಾಧಿಕಾರಗಳೊಂದಿಗೆ ಯುಕೆ ಆರೋಗ್ಯ ಸುರಕ್ಷತಾ ಏಜೆನ್ಸಿ ಚರ್ಚಿಸಿದ್ದು, ರೋಗ ನಿಯಂತ್ರಣ ತಡೆಗೆ ಹೊಸ ಮಾರ್ಗಸೂಚಿಯನ್ನೂ ಹೊರಡಿಸಿದೆ.

ಮಂಕಿಪಾಕ್ಸ್ ಸೋಂಕಿತರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ಸಹ ನಿಲ್ಲಿಸುವಂತೆ ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ

ಮಂಕಿಪಾಕ್ಸ್ ಸಾಮಾನ್ಯವಾಗಿ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ ಎಂಬುದರ ಬಗ್ಗೆ ಜನರಿಗೆ ಭರವಸೆ ನೀಡುತ್ತೇವೆ. ಒಟ್ಟಾರೆ ಸಾಮಾನ್ಯ ಜನರಿಗೆ ತೊಂದರೆ ಕಡಿಮೆಯಾಗಿದೆ ಎಂದು ವೆಲ್ಸ್ ನ ಹೆಲ್ತ್ ಪ್ರೊಟೆಕ್ಷನ್ ಫಾರ್ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕ ಅನಿವಾಸಿ ಭಾರತೀಯ ಡಾ.ಗಿರಿ ಶಂಕರ್ ಹೇಳಿದ್ದಾರೆ.

ಈ ಮಾರ್ಗಸೂಚಿ ಅಭಿವೃದ್ಧಿಗೆ ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಏಜೆನ್ಸಿ ಹಾಗೂ ಯುಕೆ ಹೆಲ್ತ್ ಸುರಕ್ಷತಾ ಏಜೆನ್ಸಿಯೊಂದಿಗೆ ಕಾರ್ಯೋನ್ಮುಖರಾಗಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಮಂಕಿಪಾಕ್ಸ್ ಪ್ರಕರಣವೂ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಿದೆ. ಕೋವಿಡ್-19 ಹಾಗೂ ಎಬೋಲಾ ವೈರಸ್ ಹರಡಿದ ಸಂದರ್ಭದಲ್ಲೂ ಇಂತಹ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.

MONKEY

ಮಾರ್ಗಸೂಚಿಯಲ್ಲಿ ಏನಿದೆ?

  • ಮಂಕಿಪಾಕ್ಸ್ ದೃಢಪಟ್ಟ ಜನರು 21 ದಿನಗಳ ಕಾಲ ಮನೆಯಲ್ಲಿಯೇ ಐಸೋಲೆಟೆಡ್ ಆಗಬೇಕು.
  • ತಮ್ಮ ದೇಹದ ಯಾವುದೇ ಭಾಗದಲ್ಲಾದರೂ ಗಾಯ ಅಥವಾ ಗಾಯದ ಕಲೆಗಳು ಕಾಣಿಸಿಕೊಂಡರೆ ಕೂಡಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು.
  • ಸೆಕ್ಸ್ ಮೂಲಕವೂ ಮಂಕಿಪಾಕ್ಸ್ ಹರಡುವ ಬಗ್ಗೆ ಪುರಾವೆಗಳು ದೂರೆತಿರುವುದರಿಂದ ಆದಷ್ಟು ಅದನ್ನು ತಡೆಯಬೇಕು.
  • ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸಬೇಕು.

Leave a Reply

Your email address will not be published.

Back to top button