ಮೈಸೂರು: ಕಾಂಗ್ರೆಸ್‌ನಲ್ಲಿ ಎಂಎಲ್‌ಸಿ ಚುನಾವಣೆಗೆ ಟಿಕೆಟ್ ಕೇಳಲು ಬ್ಯಾಂಕ್‌ನಲ್ಲಿ 15 ಕೋಟಿ ರೂ. ಇರಬೇಕಂತೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರೇ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತಾಡುವ ಮಟ್ಟಕ್ಕೆ ತಂದುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಎಂಎಲ್‌ಸಿ ಚುನಾವಣೆಗೆ ಟಿಕೆಟ್ ಕೇಳಲು 1 ಲಕ್ಷ ರೂ. ಕೊಟ್ಟು ಅರ್ಜಿ ಹಾಕಬೇಕಂತೆ. ಬ್ಯಾಂಕ್ ಡಿಪಾಸಿಟ್ 15 ಕೋಟಿ ಇರಬೇಕಂತೆ ಇದು ಕಾಂಗ್ರೆಸ್ ಸ್ಥಿತಿ. ಮಳೆ ಬಂದು ಜನರ ಬದುಕು ಬೀದಿಆಗಿದೆ. ಸಿದ್ದರಾಮಯ್ಯ ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ
Advertisement
Advertisement
ಸಿದ್ದರಾಮಯ್ಯ ದಲಿತ ಮುಖ್ಯಮಂತ್ರಿಗೆ ನನ್ನ ಬೆಂಬಲ ಅಂತ ಹೇಳುತ್ತಾರೆ. ಮತ್ತೊಂದೆಡೆ ನಾನೇ ದಲಿತ ಅಂತ ಹೇಳುತ್ತಾರೆ. ಅಂದರೆ ನಾನೇ ಮುಂದಿನ ಮುಖ್ಯಮಂತ್ರಿ ಅಂತ ಇದರ ಅರ್ಥ. ಖರ್ಗೆ ಇಲ್ಲವಾ, ಪರಮೇಶ್ವರ ಇಲ್ಲವಾ. ಇವರು ಮುಖ್ಯಮಂತ್ರಿಯಾಗಬಾರದಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ: ಸಚಿವ ಸುಧಾಕರ್
Advertisement
ಬಿಟ್ ಕಾಯಿನ್ ಹಗರಣ ಕುರಿತು ಮಾತನಾಡಿದ ವಿಶ್ವನಾಥ್, ಈ ಬಗ್ಗೆ ಸರಿಯಾಗಿ ಹೇಳುವವರು ಯಾರು ಇಲ್ಲ. ನನಗೆ ಎರಡು ಸಾಕ್ಷಿ ಕೊಡಿ. ನಾನೇ ದೊಡ್ಡ ಮಟ್ಟದ ತನಿಖೆಗೆ ಆಗ್ರಹಿಸುತ್ತೇನೆ. ಸಿದ್ದರಾಮಯ್ಯ ಅವರೇ ಬಿಟ್ ಕಾಯಿನ್ ಅಂದರೆ ಏನೂ ಹೇಳಿ? ಈ ವಿಚಾರವಾಗಿ ಹಿಟ್ ಅಂಡ್ ರನ್ ಮಾಡಲಾಗುತ್ತಿದೆ ಅಷ್ಟೆ. ಡಿನೋಟಿಫಿಕೇಷನ್‌ಗೆ ರಿಡೂ ಅಂತಾ ಹೆಸರಿಟ್ಟ ಸಿದ್ದರಾಮಯ್ಯಗೆ ಬಿಟ್ ಕಾಯಿನ್ ಬಗ್ಗೆ ಗೊತ್ತಿರಬೇಕಲ್ವಾ? ಬೆಕ್ಕು ಈ ಕಡೆಯಿಂದ ಹೋಯ್ತ, ಬೆಕ್ಕು ಆ ಕಡೆಯಿಂದ ಬಂತು ಎನ್ನೋ ರೀತಿ ಕಥೆ ಹೇಳಬೇಡಿ. ಎಲ್ಲರಿಗೂ ಶ್ರೀಕಿ ಬಗ್ಗೆ ಭಯ. ಹೆಚ್ಚಿನ ವಿಚಾರಣೆ ಮಾಡಿದರೆ ತಮ್ಮ ಸತ್ಯ ಹೊರ ಬರುತ್ತದೆ ಎಂಬ ಭಯ ಕಾಡುತ್ತಿರಬೇಕು ಎಂದು ತಿರುಗೇಟು ನೀಡಿದರು.
Advertisement
ಹಂಸಲೇಖ ಅವರ ವಿವಾದ ಕುರಿತು ಪ್ರತಿಕ್ರಿಯಿಸಿ, ನಾಡಿನ ಬಹು ದೊಡ್ಡ ಸಾಂಸ್ಕೃತಿಕ ಪ್ರತಿನಿಧಿ ಹಂಸಲೇಖಾ ಅವರು ಪೇಜಾವರ ಶ್ರೀಗಳ ಬಗ್ಗೆ ಯಾಕೆ ಈ ರೀತಿ ಹೇಳಿದರು ಎಂದು ಗೊತ್ತಾಗುತ್ತಿಲ್ಲ. ಸ್ವಾಮೀಜಿಗಳ ಆಹಾರ ಬಗ್ಗೆ ಪ್ರಶ್ನಿಸಬಾರದಿತ್ತು. ವಿಭಿನ್ನ ಊಟ, ವಿಭಿನ್ನ ಜಾತಿ, ಧರ್ಮ ಇರುವ ವ್ಯವಸ್ಥೆ ನಮ್ಮದು. ನಮ್ಮಲ್ಲಿ ಹುಸಿ ಚಿಂತಕರು, ಹುಸಿ ಸಮಾಜವಾದಿಗಳು ಹೆಚ್ಚಿದ್ದಾರೆ. ಇವರಿಂದ ಇದರ ಚರ್ಚೆ ಬೇರೆ ಬೇರೆ ಕಡೆ ಸಾಗುತ್ತಿದೆ. ಈ ಚರ್ಚೆಗೆ ಇತಿಶ್ರೀ ಹಾಡಿ ಮತ್ತೆ ಮತ್ತೆ ಈ ವಿಷಯ ಎಳೆದು ಕಲುಷಿತ ಮಾಡಬೇಡಿ ಎಂದು ಹೇಳಿದರು.