ಗದಗ: ಕಾಂಗ್ರೆಸ್ (Congress) ಸರ್ಕಾರದ ಹಗರಣಗಳ ಬಗ್ಗೆ ಸಿನೆಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ (BJP) ನರಗುಂದ ಶಾಸಕ ಸಿ.ಸಿ ಪಾಟೀಲ್ (C C Patil) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಕಚೇರಿಯಲ್ಲಿ ಮಾತನಾಡಿದ ಅವರು, ಹಗರಣಗಳ ಸುಳಿಯಲ್ಲಿ ಸರ್ಕಾರ ಸಿಲುಕಿದೆ. ತನ್ನ ಹಗರಣಗಳು ಬೆಳಕಿಗೆ ಬರಬಾರದೆಂದು ಒಂದಲ್ಲ ಒಂದು ಕಥೆ ಬಿಡುತ್ತಿದೆ. ಮೊದಲು ಹುಲಿ ಉಗುರಿನದು ಬಿಟ್ಟರು. ವಾಲ್ಮೀಕಿ ಹಗರಣ ಬಂದಾಗ ದರ್ಶನ್ ವಿಚಾರ ಬಂತು. ಈಗ ಮುಡಾ ಹಗರಣ ಬಂದಾಗ ವಕ್ಫ್ ಬೋರ್ಡ್ ಬಂದಿದೆ. ಹಗರಣಗಳನ್ನ ಮುಚ್ಚಿಹಾಕಲು ಒಂದಿಲ್ಲೊಂದು ದಂತಕಥೆಗಳನ್ನು ತೇಲಿಬಿಡುತ್ತಾರೆ. ಆಡಳಿತದ ವೈಫಲ್ಯತೆ ಕಡೆಗೆ ರಾಜ್ಯದ ಜನರ ಗಮನ ಹೋಗದ ಹಾಗೆ ನೋಡುತ್ತಿದ್ದಾರೆ. ಸಿಎಂ ಅವರು ಗಾಳಿ ಸುದ್ದಿ ಬಿಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಹೆಚ್‍ಡಿಕೆ
Advertisement
Advertisement
ನಿಮ್ಮ ಆಡಳಿತ ನಿಮಗೆ ತೃಪ್ತಿ ತರುತ್ತಿದೆಯಾ ಎಂದು ಆತ್ಮಸಾಕ್ಷಿಯಾಗಿ ಸಿಎಂ ಹೇಳಿ. 2 ವರ್ಷದಲ್ಲಿ ರಾಜ್ಯ ಏನು ಅಭಿವೃದ್ಧಿ ಆಗಿದೆ. ಗ್ಯಾರಂಟಿ ಕೊಟ್ಟಿದ್ದೇನೆ ಅಂತೀರಾ ಅದಕ್ಕೆ ವಿರೋಧ ಇಲ್ಲ. ಅಭಿವೃದ್ಧಿ ಏನು ಮಾಡಿದ್ದೀರಿ? ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆದು ಶಾಸಕರ ಅಭಿಪ್ರಾಯ ಕೇಳಿ. ಆಗ ನಿಮ್ಮ ನೈಜ ಬಣ್ಣ ಗೊತ್ತಾಗುತ್ತೆ. ಸಿಎಂ ಡಿಸಿಎಂಗೆ ಹೇಳೋಕೆ ಇಚ್ಚೆ ಪಡುತ್ತೇನೆ. ಕನ್ನಡ ರಾಜ್ಯೋತ್ಸವದ ಬಗ್ಗೆ ಕೇವಲ ಡಿಸಿಎಂ ಜಾಹೀರಾತು ಬರುತ್ತದೆ. ಸಿಎಂದು ಹೆಚ್ಚು ಜಾಹಿರಾತು ಇಲ್ಲವೇ ಇಲ್ಲ. ಏನು ವಿಚಿತ್ರ ಸರ್ಕಾರ. ನಾನು 4ನೇ ಬಾರಿ ಶಾಸಕ, ನಾನಂತೂ ಇಂತಹ ಸರ್ಕಾರ ನೋಡಿದ್ದೇ ಇಲ್ಲ ಎಂದರು. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆ ತಲುಪಿದ ದರ್ಶನ್ – ಸರ್ಜರಿ ಕೊನೇ ಆಯ್ಕೆಯಾಗಿ ಪರಿಗಣಿಸುವಂತೆ ಕುಟುಂಬಸ್ಥರ ಮನವಿ
Advertisement
Advertisement
ಇನ್ನು ವಕ್ಫ್ ಆಸ್ತಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾತನಾಡಿ, ಪಂಚಮಸಾಲಿ ಕೂಡಲಸಂಗಮ ಪೀಠ, ಹರಿಹರ ಪಂಚಮಸಾಲಿ ಪೀಠ ವಕ್ಫ್ ಬೋರ್ಡ್ ಅನ್ನುತ್ತಾರೋ ಏನೋ. ವಕ್ಫ್ ಬೋರ್ಡ್ ವಿಚಾರಕ್ಕೆ ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳು ವಿಚಾರ ಮಾಡಬೇಕು. ಇಂದು ಯಾರದೋ ಹೊಲಕ್ಕೆ ಬಂದಿದೆ, ನಾಳೆ ನನ್ನ ಮನೆಗೆ ಬರಲ್ಲ ಅನ್ನುವ ಗ್ಯಾರಂಟಿ ಏನು? ನಮ್ಮ ಮಠಕ್ಕೆ ಬರಲ್ಲ ಅನ್ನೋ ಗ್ಯಾರಂಟಿ ಏನಿದೆ? ಕೂಡಲಸಂಗಮ ಪಂಚಮಸಾಲಿ ಪೀಠಾನೂ ವಕ್ಫ್ ಬೋರ್ಡ್ ಅಂತಾರೋ ಏನೋ? ಕಾಂಗ್ರೆಸ್ ತುಷ್ಟೀಕರಣ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನು ಹಿಂದಿನ ದಿನ ರೈತರ ಹೆಸರಲ್ಲಿತ್ತು. ಮರುದಿನ ವಕ್ಫ್ ಬೋರ್ಡ್ ಹೆಸರಿನಲ್ಲಿ ಪಹಣಿ ಆಗಿದೆ. ಸಚಿವ ಜಮೀರ್ ಅಹ್ಮದ್ ವಿಜಯಪುರಕ್ಕೆ ಭೇಟಿ ಕೊಟ್ಟು ಬಂದ 24 ಗಂಟೆಯೊಳಗೆ ಸಾವಿರಾರು ಎಕರೆ ಜಮೀನನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಿದರು. ಇದಕ್ಕೆಲ್ಲಾ ಕಾರಣರಾದ ಅಲ್ಲಿನ ಜಿಲ್ಲಾಧಿಕಾರಿ ಬೂಬಾಲನ್ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ತೊಳಲಾಟವನ್ನು ಬಹಿರಂಗವಾಗಿ ಹೇಳಿದ ಡಿಕೆಶಿಗೆ ಅಭಿನಂದನೆ: ವಿ.ಸೋಮಣ್ಣ ವ್ಯಂಗ್ಯ
ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಿನ್ನೆಲೆ ಪುನಃ ರೈತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ರಾಜ್ಯದಲ್ಲಿ ಏನು ನಡೆಯುತ್ತಿದೆ. ಹಲವಾರು ಮಂತ್ರಿಗಳು ಬಿಜೆಪಿಯವರ ಹುನ್ನಾರ ಅನ್ನುತ್ತಾರೆ. ಬಿಜೆಪಿಯವರು ಪಹಣಿ ತಿದ್ದಿಸಿದ್ರಾ? ಡಿಸಿ ಬಿಜೆಪಿಯವರ ಮಾತು ಕೇಳುತ್ತಾನಾ? ಕಾಂಗ್ರೆಸ್‌ನವರ ಮಾತು ಕೇಳುತ್ತಾನಾ?ಜಿಲ್ಲಾಧಿಕಾರಿಗೆ ತನ್ನ ಕರ್ತವ್ಯದ ಅರಿವಿರಬೇಕಿತ್ತು. ಸರ್ಕಾರ ಹೇಳಿದ್ದನ್ನು ಕೇಳಲು ಜಿಲ್ಲಾಧಿಕಾರಿ ಇರಲ್ಲ, ಅವರು ಐಎಎಸ್ ಕೇಡರ್ ಅಧಿಕಾರಿ. ಈ ದೇಶದ ಕಾನೂನಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಆ ಜಿಲ್ಲಾಧಿಕಾರಿ ಮೇಲೂ ಕ್ರಮ ಆಗಬೇಕೆಂದು ಹೇಳಿದರು. ಇದನ್ನೂ ಓದಿ: ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ
ವಕ್ಫ್ ಬೋರ್ಡ್ (Waqf Board) ಆಸ್ತಿ ಸಲುವಾಗಿ ಬಸವಣ್ಣನ ಕಾಲದ ಸಿಂಧಗಿಯ ವಿರಕ್ತಮಠ, ಬೀರಲಿಂಗೇಶ್ವರ ಮಠ ಅದೂ ವಕ್ಫ್ ಎಂದು ಮಾಡಿದ್ದಾರೆ. ಬೀರಲಿಂಗೇಶ್ವರ ಮಠ ವಕ್ಫ್ ಎಂದು ಗೊತ್ತಾದ ಮೇಲೆ ಮುಖ್ಯಮಂತ್ರಿ ಕಣ್ಣು ತೆರೆದರು ಅನಿಸುತ್ತದೆ. ಇದೊಂದು ತುಘಲಕ್ ಸರ್ಕಾರ ಅಂದ್ರೆ ತಪ್ಪಲ್ಲ. ಮತಗಳಿಕೆಗಾಗಿ ಯೋಜನೆ ಕೊಡಲಿ, ಮಾಡಲಿ. ಆದರೆ ಒಂದು ಸಮಾಜ, ವರ್ಗವನ್ನ ತುಳಿದು ಇನ್ನೊಂದು ಸಮಾಜವನ್ನು ಓಲೈಕೆ ಮಾಡೋದು ಎಷ್ಟು ಸಮಂಜಸ? ಸಿಎಂ ಆಗೋವಾಗ ಈ ನಾಡಿನ ಕಾನೂನಿಗನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ವಚನ ತೆಗೆದುಕೊಳ್ಳುತ್ತೀರಿ. ಇದೇನಾ ನಿಮ್ಮ ಕಾನೂನು? ಇಂತಹ ಬೇಜವಾಬ್ದಾರಿ ಆಡಳಿತ ಕರ್ನಾಟಕದ ಜನತೆ ನೋಡಲಿಲ್ಲ. ಗೊಂದಲದಲ್ಲಿ ಇರೋದಕ್ಕಿಂತ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋದು ಸೂಕ್ತ. ಮರು ಜನಾದೇಶ ಪಡೆಯೋದು ಸೂಕ್ತ ಎಂದು ಹರಿಹಾಯ್ದರು. ಇದನ್ನೂ ಓದಿ: ಮಹಿಳೆಯನ್ನ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುಷ್ಕರ್ಮಿಗಳು