ಚೆನ್ನೈ: ತಮಿಳರಿಗೆ ಶನಿವಾರ ಹೊಸ ವರ್ಷದ ಸಂಭ್ರಮ. ಹೀಗಾಗಿ ತಮಿಳುನಾಡು ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು.
ಹೊಸ ವರ್ಷವನ್ನು ಕೊಯಂಬತ್ತೂರಿನಲ್ಲಿ ವಿಭಿನ್ನವಾಗಿ ಆಚರಿಸಲಾಗಿದೆ. ಪ್ರಸಿದ್ಧ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬರೋಬ್ಬರಿ 4 ಕೋಟಿ ರೂ.ಮೌಲ್ಯದ ನೋಟುಗಳಿಂದ ಮುತ್ತು ಮಾರಿಯಮ್ಮನಿಗೆ ಅಲಂಕಾರ ಮಾಡಲಾಗಿತ್ತು.
Advertisement
ಶ್ರೀ ಮುತ್ತುಮರಿಯಮ್ಮನ್ ದೇವಾಲಯವು ಪುರಾತನ ಕಾಲದ ಮಂದಿರವಾಗಿದೆ. ಇಲ್ಲಿಗೆ ದೂರದ ಪ್ರದೇಶಗಳಿಂದ ಸ್ಥಳೀಯರು ಮತ್ತು ಭಕ್ತರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಉತ್ಸವಗಳಲ್ಲಿ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಹೊಸ ವರ್ಷದ ಆಚರಣೆ ಪ್ರಯುಕ್ತ ಅನೇಕ ಭಕ್ತರು ಮತ್ತು ಪ್ರವಾಸಿಗರು ಬಂದಿದ್ದರು.
Advertisement
ಗರಿ ಗರಿಯ 2 ಸಾವಿರ 500 ಮತ್ತು 200 ರೂ. ನೋಟುಗಳಲ್ಲಿ ಮುತ್ತು ಮಾರಿಯಮ್ಮನನ್ನು ಅಲಂಕರಿಸಲಾಗಿತ್ತು. ಒಟ್ಟು 4 ಕೋಟಿ ರೂ. ಮೌಲ್ಯದ ನೋಟುಗಳ ಜೊತೆಗೆ 1 ಕೋಟಿ ಮೌಲ್ಯದ ವಜ್ರ ಹಾಗೂ ಮುತ್ತುಗಳನ್ನು ಅಲಂಕಾರದಲ್ಲಿ ಬಳಸಲಾಗಿತ್ತು.
Advertisement
ಸಕಲ ಸಂಪನ್ನೆಯಾಗಿ ಮೈದಳೆದಿರುವ ನೋಟಿನ ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬಂದಿತ್ತು. ಭಕ್ತರಂತೂ ಬಿಟ್ಟ ಕಣ್ಣನ್ನು ಬಿಟ್ಟಂತೆ ದೇವಿಯನ್ನು ನೋಡಿ ಕೈ ಮುಗಿದಿದ್ದಾರೆ.
Advertisement
Coimbatore: Idol at Sri Muthumariamman Temple decorated with currency worth Rs 4 Crores and diamonds & pearls worth Rs 1 Crore, on the occasion of Tamil new year. pic.twitter.com/YxNv0yIKUA
— ANI (@ANI) April 14, 2018