ಪತಿಯನ್ನು ಗುರುತಿಸಿ-ವೈರಲ್ ಆಯ್ತು ಸೆಹ್ವಾಗ್ ಟ್ವೀಟ್

Public TV
1 Min Read
sehwag tweet

ನವದೆಹಲಿ: ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮತ್ತೊಮ್ಮೆ ವಿಶಿಷ್ಟ ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎರಡು ಪಕ್ಷಿಗಳ ಫೋಟೋ ಟ್ವೀಟ್ ಮಾಡಿರುವ ಸೆಹ್ವಾಗ್, ಪಕ್ಷಿಗಳ ಬಗ್ಗೆ ಹೆಚ್ಚು ತಿಳಿಯದಿದ್ದರೂ ಈ ಚಿತ್ರದಲ್ಲಿ ಪತಿಯನ್ನು ಗುರುತಿಸುವುದು ಸುಲಭ ಎಂದು ಫೋಟೋಗೆ ಹಣೆಬರಹ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೆಹ್ವಾಗ್ ಟ್ವೀಟ್ ಮಾಡಿರುವ ಫೋಟೋ ವೈರಲ್ ಆಗಿದ್ದು, ಹಲವರು ಮರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೆಹ್ವಾಗ್ ಈ ಹಿಂದೆಯೂ ತಮ್ಮ ಟ್ಟಿಟ್ವರಿನಲ್ಲಿ ಕೌಟುಂಬಿಕ ಜೀವನದಲ್ಲಿ ಗಂಡನ ಪಾತ್ರದ ಕುರಿತು ತಿಳಿಹಾಸ್ಯ ದಾಟಿಯಲ್ಲಿ ಟ್ವೀಟ್ ಮಾಡಿ ಗಮನೆಸೆಳೆದಿದ್ದರು.

ಸೆಹ್ವಾಗ್‍ರ ಈ ಟ್ವೀಟನ್ನು 3 ಸಾವಿರಕ್ಕೂ ಅಧಿಕ ಮಂದಿ ಮರುಟ್ವೀಟ್ ಮಾಡಿದ್ದು, 33 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 900ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಸೆಹ್ವಾಗ್ ರ ಹಾಸ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತು ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ತಮ್ಮ ಪತ್ನಿ ಅರತಿ ಅವರೊಂದಿನ ಫೋಟೋ ಟ್ವೀಟ್ ಮಾಡಿದ್ದ ಸೆಹ್ವಾಗ್, ವೈವಾಹಿಕ ಜೀವನದಲ್ಲಿ ಮಹಿಳೆಯರೇ ಸ್ಟ್ರಾಂಗ್ ಎಂಬರ್ಥದ ಹಣೆಬರಹ ನೀಡಿದ್ದರು. ಬಳಿಕ ಜೂನ್‍ನಲ್ಲೂ ಇಂತಹದ್ದೇ ಟ್ವೀಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *