ವಿಜಯಪುರ: 422 ವಸ್ತುಗಳನ್ನು ಗುರುತಿಸುವ ಮೂಲಕ ವಿಜಯಪುರದಲ್ಲಿ (Vijayapura) 9 ತಿಂಗಳ ಪುಟ್ಟ ಮಗು ನೊಬೆಲ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾಳೆ.
Advertisement
ಹೌದು, ಈ ಮಗುವಿನ ಹೆಸರು ಐರಾ ಕತ್ತಿ, ಬರೋಬ್ಬರಿ 422 ವಸ್ತುಗಳನ್ನು ಗುರುತಿಸುವ ಮೂಲಕ ಅವಿಸ್ಮರಣೀಯ ಸಾಧನೆ ಮಾಡುವ ಮೂಲಕ ನೊಬೆಲ್ ವರ್ಲ್ಡ್ ರೆಕಾರ್ಡ್ನಲ್ಲಿ ತನ್ನ ಹೆಸರು ಬರೆದಿದ್ದಾಳೆ. ಈ ಪುಟ್ಟ ಮಗುವಿನ ಅಮೋಘ ಸಾಧನೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಅಂಬೆಗಾಲಿಟ್ಟು ನಡೆಯುವ ವಯಸ್ಸಿಗೆ ತನಗೆ ಗೊತ್ತಿಲ್ಲದಂತೆಯೇ ವರ್ಲ್ಡ್ ರೆಕಾರ್ಡ್ ಪುಟ ಸೇರಿ ಸಾಧನೆ ಮಾಡಿದ್ದಾಳೆ.ಇದನ್ನೂ ಓದಿ: Bengaluru| ಅರಮನೆ ಮೈದಾನದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
Advertisement
Advertisement
ನಗರದ ದೀಪಕ್ ಕತ್ತಿ ಹಾಗೂ ಅನುಷಾ ಕತ್ತಿ ದಂಪತಿಯ ಮಗಳು ಐರಾ. ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಅತೀ ಹೆಚ್ಚು ವಸ್ತುಗಳನ್ನು ಗುರುತಿಸಿದ ಅತೀ ಕಿರಿಯ ವಯಸ್ಸಿನ ಮಗು ಎನ್ನುವ ಗೌರವಕ್ಕೆ ಪಾತ್ರಳಾಗಿದ್ದು, ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ಕೂಡ ಮಗುವನ್ನು ಕರೆದು ಆಕೆಯ ಸಾಧನೆಯನ್ನು ಮೆಚ್ಚಿ ಗೌರವಿಸಿದ್ದಾರೆ.
Advertisement
ಐರಾ ಫ್ಲ್ಯಾಶ್ ಕಾರ್ಡ್ ಬಳಸಿ ವಿಭಿನ್ನ ಪ್ರಕಾರದ 422 ವಸ್ತುಗಳನ್ನು ಗುರುತಿಸಿದ್ದಾಳೆ. ಹಣ್ಣುಗಳು 24, ಕಾಡು ಪ್ರಾಣಿಗಳು 24, ದೇಹದ ಭಾಗಗಳು 24, ತರಕಾರಿ ಸೇರಿದಂತೆ ಹೀಗೆ 422 ವಸ್ತುಗಳನ್ನು ಗುರುತಿಸಿ ಸಾಧನೆ ಮಾಡಿದ್ದಾಳೆ. ಒಂಬತ್ತು ತಿಂಗಳು ಪುಟ್ಟ ಮಗು ಅದ್ಭುತ ಸಾಧನೆಗೆ ಅವಳ ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಅತ್ಯುತ್ತಮ ಕಲಿಕಾ ಸಾಮರ್ಥ್ಯ ತೋರಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಗುವಿನ ಸಮರ್ಥವಾಗಿ ಪಾಲನೆ, ಕಲಿಕೆ ಮಾರ್ಗದರ್ಶನ ನೀಡಿದಾಗ ಇಂತಹ ಆಕರ್ಷಕ ಸಾಧನೆ ಮಾಡಲು ಐರಾ ಸಾಕ್ಷಿಯಾಗಿದ್ದಾಳೆ. ತಾಯಿ ಅನುಷಾ ಐರಾಳ ಸಾಧನೆಗೆ ಪ್ರೇರಣೆಯಾಗಿದ್ದು, ತಂದೆ ದೀಪಿಕ್ ಮಾರ್ಗದರ್ಶನ ಬೆಂಬಲ ಕಾರಣವಾಗಿದೆ. ಮಗಳ ಸಾಧನೆಗೆ ಪೋಷಕರು ಫುಲ್ ಖುಷಿಯಾಗಿ ಸಂತಸ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂಡಿಸುತ್ತಾರೆ. ಇದರಿಂದ ಮಗುವಿನ ಬೌದ್ಧಿಕ ಬೆಳವಣಿಗೆ ಕೂಡಾ ಕುಂಠಿತ ಮಾಡುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಈ ಪುಟ್ಟ ಕಂದ ಐರಾಳ ಸಾಧನೆ ನಿಜಕ್ಕೂ ಶ್ಲಾಘನೀಯವೇ ಸರಿ. ಇನ್ನೂ ಮಗಳ ಈ ಸಾಧನೆಗೆ ಪೋಷಕರ ಪಾತ್ರ ಕೂಡಾ ಹೆಚ್ಚಾಗಿದೆ.ಇದನ್ನೂ ಓದಿ: ದರ್ಶನ್ ಬರ್ತ್‌ಡೇ ಸಂಭ್ರಮ; ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ