ಕೋಲ್ಕತ್ತಾ: 2023ರ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ನಡೆಯುವ ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳಿಗೆ ಟಿಕೆಟ್ ದರವನ್ನು ಬಹಿರಂಗಪಡಿಸಲಾಗಿದೆ.
ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣವು 1 ಸೆಮಿಫೈನಲ್ ಸೇರಿದಂತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ (Snehashis Ganguly) ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳ ಬೆಲೆಯನ್ನ ಘೋಷಿಸಿದ್ದಾರೆ. ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಎಲ್ಲ ಪಂದ್ಯಗಳಿಗೆ 650 ರೂ.ಗಳಿಂದ 3,000 ರೂ.ಗಳವರೆಗೆ ಬೆಲೆಗಳು ಇರಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಈ ಐತಿಹಾಸಿಕ ಮೈದಾನವು ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ಭಾರತ-ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು 2ನೇ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ
Advertisement
ಯಾವ ಪಂದ್ಯಕ್ಕೆ ಎಷ್ಟು ಶುಲ್ಕ?
ಮೊದಲ ಪಂದ್ಯಕ್ಕೆ (ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ) 650 ರೂ., 4ನೇ ಪಂದ್ಯಕ್ಕೆ (ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ) ಮತ್ತು 2ನೇ ಪಂದ್ಯಕ್ಕೆ (ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ) 800 ರೂ.ಗಳಿಂದ ಪ್ರಾರಂಭವಾಗಿ 2,200 ರೂ.ಗಳವರೆಗೆ ಟಿಕೆಟ್ ದರ ನಿಗದಿಮಾಡಲಾಗಿದೆ. ಮತ್ತೊಂದೆಡೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯದ ಟಿಕೆಟ್ ದರ 900-3,000 ರೂ.ವರೆಗೆ ಇರಲಿದೆ.
Advertisement
ಅಕ್ಟೋಬರ್ 28 ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಮೇಲಿನ ಹಂತದ ಸೀಟುಗಳಿಗೆ ಕನಿಷ್ಠ ಟಿಕೆಟ್ ದರ 650 ರೂ. ಡಿ ಮತ್ತು ಹೆಚ್ ಬ್ಲಾಕ್ ಟಿಕೆಟ್‌ಗಳ ಬೆಲೆ 1,000 ರೂ ಆಗಿದ್ದರೆ, ಬಿ, ಸಿ, ಕೆ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳ ಬೆಲೆ 1500 ರೂ. ನಿಗದಿಯಾಗಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ, ಹಾಗೆಯೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಟಿಕೆಟ್ ದರವು ಮೇಲಿನ ಹಂತಗಳಿಗೆ 800 ರೂ. ಡಿ ಮತ್ತು ಎಚ್ ಬ್ಲಾಕ್ ಟಿಕೆಟ್‌ಗಳು ರೂ 1200, ಸಿ ಮತ್ತು ಕೆ ಬ್ಲಾಕ್ ಟಿಕೆಟ್‌ಗಳು ರೂ 2,000 ಮತ್ತು ಬಿ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳು ಗರಿಷ್ಠ ರೂ 2,200ಗೆ ಲಭ್ಯವಿರುತ್ತವೆ.
2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ, ಕೋಲ್ಕತಾದಲ್ಲಿ ಅಪೂರ್ಣ ನಿರ್ಮಾಣ ಕಾಮಗಾರಿಗಳಿಂದಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಳ ಮುಖಾಮುಖಿ ಪಂದ್ಯಕ್ಕೆ ಆತಿಥ್ಯ ವಹಿಸಲು ವಿಫಲಗೊಂಡಿತ್ತು. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ
ಇಂಡೋ-ಪಾಕ್ ಕದನ ಕೂಡ ನಡೆಯಬಹುದು:
ಈಡನ್ ಗಾರ್ಡನ್ಸ್‌ನ 5 ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯವೂ ಸೇರಬಹುದು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆದರೆ ನವೆಂಬರ್ 16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಿಗದಿಯಾಗಬಹುದು.
Web Stories