ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final) ಪಂದ್ಯ ರೋಚಕ ಘಟಕ್ಕೆ ತಲುಪಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಭಾರತ (Team India) 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದು, ಗೆಲುವಿಗೆ 280 ರನ್‌ಗಳ ಅಗತ್ಯವಿದೆ.
173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ (Australia) ತಂಡ 4ನೇ ದಿನದಾಟದಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಉಳಿದ ಒಂದೂವರೆ ದಿನದಲ್ಲಿ ಭಾರತಕ್ಕೆ ಗೆಲ್ಲಲು 444 ರನ್‌ಗಳ ಬೃಹತ್ ಗುರಿ ನೀಡಿತು. ಇದನ್ನೂ ಓದಿ: WTC Final: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ
Advertisement
Advertisement
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ (Steve Smith) ಮತ್ತು ಟ್ರಾವಿಸ್ ಹೆಡ್ (Travis Head) ಶತಕಗಳ ನೆರವಿನಿಂದ 469 ರನ್ ಗಳಿಸಿ ಆಲೌಟ್ ಆಗಿತ್ತು. ಆದ್ರೆ ಭಾರತ ಅಜಿಂಕ್ಯಾ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ 296 ರನ್‌ಗಳಿಗೆ ಸರ್ವಪತನ ಕಂಡಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸೀಸ್ 3ನೇ ದಿನ ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದ್ದರೆ ಇಂದು ಆ ಮೊತ್ತಕ್ಕೆ 147 ರನ್ ಗಳಿಸಿ ಅಂತಿಮವಾಗಿ 84.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 270 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
Advertisement
Advertisement
ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜಾ 13 ರನ್, ಡೇವಿಡ್ ವಾರ್ನರ್ 1 ರನ್, ಮಾರ್ನಸ್ ಲಾಬುಶೇನ್ 41 ರನ್, ಸ್ಟೀವ್ ಸ್ಮಿತ್ 34 ರನ್, ಟ್ರಾವಿಸ್ ಹೆಡ್ 18 ರನ್, ಕ್ಯಾಮರೂನ್ ಗ್ರೀನ್ 25 ರನ್, ಮಿಚೆಲ್ ಸ್ಟಾರ್ಕ್ 41 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 5 ರನ್ ಗಳಿಸಿ ಔಟಾದರೆ ಅಲೆಕ್ಸ್ ಕ್ಯಾರಿ 66 ರನ್ ಗಳಿಸಿ ಅಜೇಯರಾಗುಳಿದರು.
ಇನ್ನೂ 444 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಭಾರತ 4ನೇ ದಿನದ ಅಂತ್ಯಕ್ಕೆ 44 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ
ಶನಿವಾರ ತನ್ನ ಸರದಿ ಆರಂಭಿಸಿದ ಭಾರತದ ಪರ ಶುಭಮನ್ ಗಿಲ್ (Shubman Gill) ಹಾಗೂ ನಾಯಕ ರೋಹಿತ್ ಶರ್ಮಾ (Rohit Sharma) ಜೋಡಿ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟವಾಡಿದರೆ, ರೋಹಿತ್ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ 2ನೇ ವಿಕೆಟ್‌ಗೆ 51 ರನ್ ಜೊತೆಯಾಟವಾಡಿತು. ನಂತರ ಜೊತೆಗೂಡಿದ ರಹಾನೆ ಹಾಗೂ ವಿರಾಟ್ ಕೊಹ್ಲಿ (Virat Kohli) ಜೋಡಿ ಮುರಿಯದ 4ನೇ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿತು.
ರೋಹಿತ್ ಶರ್ಮಾ 43 ರನ್ (60 ಎಸೆತ, 7 ಬೌಂಡರಿ, 1 ಸಿಕ್ಸರ್), ಶುಭಮನ್ ಗಿಲ್ 18 ರನ್, ಚೇತೇಶ್ವರ್ ಪೂಜಾರಾ 27 ರನ್ ಗಳಿಸಿ ಔಟಾದರು. ಇನ್ನೂ ವಿರಾಟ್ ಕೊಹ್ಲಿ 44 ರನ್ (60 ಎಸೆತ, 7 ಬೌಂಡರಿ) ಅಜಿಂಕ್ಯಾ ರಹಾನೆ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಭಾನುವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.