ಬೆಂಗಳೂರು: ವಿಶ್ವಕಪ್ ನಲ್ಲಿ ಇದುವರೆಗೆ ಆಡಿದ 9 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಭಾರತ ದಾಖಲೆ ಬರೆದಿದೆ. ಟೀಂ ಇಂಡಿಯಾ ಸತತ 8 ಗೆಲುವು ಸಾಧಿಸಿದ್ದೇ ಇದುವರೆಗಿನ ವಿಶ್ವಕಪ್ ಪಂದ್ಯಾವಳಿಯ ಗೆಲುವಿನ ದಾಖಲೆಯಾಗಿತ್ತು.
2003ರಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿತ್ತು. ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಇದುವರೆಗೆ 9 ಪಂದ್ಯಗಳನ್ನು ಆಡಿದ್ದು, 9 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
Advertisement
Advertisement
ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯವನ್ನಾಡಲಿದೆ. ಇದನ್ನೂ ಓದಿ: ಅಹಮದಾಬಾದ್ ಬೀದಿಯಲ್ಲಿದ್ದ ನಿರ್ಗತಿಕರಿಗೆ ಹಣ ಕೊಟ್ಟು ಸಹಾಯ ಮಾಡಿದ ಅಫ್ಘಾನ್ ಕ್ರಿಕೆಟಿಗ
Advertisement
2023ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಅಜೇಯ ‘ನವ’ಜಯ!
Advertisement
- ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
- ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
- ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
- ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
- ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
- ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
- ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
- ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು
- ಮ್ಯಾಚ್ 9: ನೆದರ್ಲೆಂಡ್ ವಿರುದ್ಧ 160 ರನ್ ಗೆಲುವು
ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್ ತಂಡವನ್ನು 160 ರನ್ ಗಳಿಂದ ಸೋಲಿಸಿದೆ. ಇದನ್ನೂ ಓದಿ: World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!
ವಿಶ್ವಕಪ್ ನಲ್ಲಿ ಇಂಡಿಯಾ ಟಾಪ್ 5 ಆಟಗಾರರ 50 ಪ್ಲಸ್ ದಾಖಲೆ!: ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಟಾಪ್ 5 ಆಟಗಾರರು 50 ಪ್ಲಸ್ ಸ್ಕೋರ್ ಬಾರಿಸಿದರು. ವಿಶ್ವಕಪ್ ಪಂದ್ಯಾವಳಿಯಲ್ಲಿ ಇದು ಮೊದಲ ಬಾರಿಯ ದಾಖಲೆ ಆಗಿದ್ದರೆ, ಏಕದಿನ ಇತಿಹಾಸದಲ್ಲಿ ಇದು 3ನೇ ಬಾರಿ ನಡೆದಿದೆ. ಈ ಹಿಂದೆ 2 ಬಾರಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ ಈ ದಾಖಲೆ ಮಾಡಿತ್ತು. 2013ರಲ್ಲಿ ಜೈಪುರದಲ್ಲಿ ಹಾಗೂ 2020ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಟಾಪ್ 5 ಆಟಗಾರರು 50 ಪ್ಲಸ್ ರನ್ ಪೇರಿಸಿದ್ದರು.