ಮುಂಬೈ: ವಿಶ್ವಕಪ್ ಕ್ರಿಕೆಟಿನ ಭಾರತ, ದಕ್ಷಿಣ ಆಫ್ರಿಕಾ (India vs South Africa) ಕ್ರಿಕೆಟ್ ಫೈನಲ್ (Final) ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಪಂದ್ಯ ನಿಗದಿ ಪ್ರಕಾರ ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದ ಇನ್ನೂ ಟಾಸ್ ಪ್ರಕ್ರಿಯೆ ನಡೆದಿಲ್ಲ.
ಭಾರತ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಇಲ್ಲಿಯವರೆಗೆ ಕಪ್ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಹೀಗಾಗಿ ಯಾರೂ ಗೆದ್ದರೂ ಮೊದಲ ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ. ಇದನ್ನೂ ಓದಿ: Women’s World Cup | ಚೊಚ್ಚಲ ಟ್ರೋಫಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ ವನಿತೆಯರು
VIDEO | Rain hits DY Patil Stadium ahead of Women’s World Cup final in Navi Mumbai. #WomensWorldCupFinal #INDvsSA #Cricket
(Full video available on PTI Videos – https://t.co/n147TvqRQz) pic.twitter.com/d5CpzZb5rT
— Press Trust of India (@PTI_News) November 2, 2025
ಮಧ್ಯಾಹ್ನ 3:30 ಆದರೂ ಸ್ಟೇಡಿಯಂ ಸುತ್ತಲೂ ಮಳೆಯಾಗುತ್ತಿದೆ. ಒಂದು ವೇಳೆ ಮಳೆ ನಿಂತರೆ ಕನಿಷ್ಠ 20 ಓವರ್‌ಗಳನ್ನು ಆಡಿಸಲಾಗುತ್ತದೆ. ಇಂದು ಆಟವನ್ನು ಆಡಿಸಲು ಸಾಧ್ಯವಾಗದೇ ಇದ್ದರೆ ನಾಳೆಗೆ ಪಂದ್ಯ ಮುಂದೂಡಲಾಗುತ್ತದೆ. ಮೀಸಲು ದಿನವೂ ಮಳೆಯಿಂದ ರದ್ದಾದರೆ ಎರಡೂ ತಂಡವನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

