ಪುಣೆ: ವಿಶ್ವಕಪ್ ಕ್ರಿಕೆಟ್ನಿಂದ (World Cup Cricket) ಬಾಂಗ್ಲಾದೇಶದ (Bangladesh) ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಔಟಾಗಿದ್ದಾರೆ.
ಸೋಮವಾರ ದೆಹಲಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ಶಕೀಬ್ ಅವರ ಎಡಗೈ ತೋರುಬೆರಳಿಗೆ ಗಾಯವಾಗಿತ್ತು. ಪಂದ್ಯದ ನಂತರ ಎಕ್ಸ್ರೇ ತೆಗೆದಾಗ ಮೂಳೆ ಮುರಿತವಾಗಿದ್ದು ದೃಢಪಟ್ಟಿತ್ತು. ಮೊಬೈಲಿನಲ್ಲೇ ಲೇಟೆಸ್ಟ್ ಸುದ್ದಿ ಓದಲು ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲಿಗೆ ಸೇರ್ಪಡೆಯಾಗಿ: ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲ್
Advertisement
ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ನವೆಂಬರ್ 11 ರಂದು ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಟೈಮ್ಡ್ ಔಟಾಗಿದ್ದಕ್ಕೆ ಶಕೀಬ್ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್
Advertisement
ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಔಟಾಗಿರುವ ಬಾಂಗ್ಲಾದೇಶ ಶ್ರೀಲಂಕಾ ವಿರುದ್ಧ 3 ವಿಕೆಟ್ಗಳ ಜಯ ಸಾಧಿಸಿತ್ತು. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?
Advertisement
ಈ ಪಂದ್ಯದಲ್ಲಿ ಶಕೀಬ್ 2 ವಿಕೆಟ್ ಪಡೆಯುವುದರ ಜೊತೆ 82 ರನ್ (65 ಎಸೆತ, 12 ಬೌಂಡರಿ, 2 ಸಿಕ್ಸರ್) ಸಿಡಿಸಿದ್ದರು. ಶಕೀಬ್ ಮತ್ತು ನಜ್ಮುಲ್ ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲುವಿನ ಕಡೆಗೆ ತಿರುಗಿಸಿದ್ದರು. ಅತ್ಯುತ್ತಮ ಆಟದ ಪ್ರದರ್ಶನಕ್ಕೆ ಶಕೀಬ್ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.