ಗಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 48 ರನ್ಗಳ ಅಮೋಘ ಗೆಲುವು ಪಡೆಯಿತು.
ಟೀಂ ಇಂಡಿಯಾ ನೀಡಿದ 168 ರನ್ಗಳ ಗುರಿ ಬೆನ್ನಟ್ಟಿದ ಆಸೀಸ್ ತಂಡ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 119 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅನುಜಾ ಪಾಟೀಲ್ 3 ವಿಕೆಟ್, ದೀಪ್ತಿ ಶರ್ಮಾ, ಪೂನಂ ಯಾದವ್, ರಾಧ ಯಾದವ್ ತಲಾ 2 ವಿಕೆಟ್ ಪಡೆದರು.
Advertisement
Four matches, four wins for India to top Group B at @WorldT20! ????????
Australia are beaten by 48 runs in Guyana!#INDvAUS scorecard and highlights ➡️ https://t.co/4sBZFG3VBL#WT20 #WatchThis pic.twitter.com/r8h1fDQX4h
— ICC (@ICC) November 17, 2018
Advertisement
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ 9 ಬೌಂಡರಿ 3 ಸಿಕ್ಸರ್ ನೆರವಿನಿಂದ 83 ರನ್ ಸಿಡಿಸಿ ಮಿಂಚಿದರು. ಉಳಿದಂತೆ ನಾಯಕಿ ಹರ್ಮನ್ ಪ್ರೀತ್ ಕೌರ್ ತಲಾ 3 ಬೌಂಡರಿ, ಸಿಕ್ಸರ್ ಗಳ ಮೂಲಕ ಕೇವಲ 27 ಎಸೆತಗಳಲ್ಲಿ 43 ರನ್ ಕಲೆಹಾಕಿದ್ರು. ನಿಗದಿತ 20 ಓವರ್ ಗಳಲ್ಲಿ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತ್ತು. ಬಲಿಷ್ಠ ಆಸೀಸ್ ತಂಡವನ್ನ ಮಣಿಸಿದ ಟೀಂ ಇಂಡಿಯಾ ಗ್ರೂಪ್ ಬಿ ಯಲ್ಲಿ ಟಾಪ್ ಸ್ಥಾನ ಪಡೆಯಿತು.
Advertisement
ಪಂದ್ಯದಲ್ಲಿ 82 ರನ್ ಗಳಿಸಿದ ಸ್ಮೃತಿ ಮಂದಾನ ಒಂದು ಸಾವಿರ ರನ್ ಪೂರೈಸಿದರು. ಈ ಮೂಲಕ ಭಾರತದ ಪರ ವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದರು.
Advertisement
From Mandhana's career-best knock to Perry's three-wicket haul to a match-defining effort by the Indian spinners – revisit all the highlights from the #WT20 match between India and Australia.
WATCH ????
???? https://t.co/RV5tLBkg8i pic.twitter.com/UXZsEE5DrH
— T20 World Cup (@T20WorldCup) November 18, 2018
An absolutely top class caught and bowled from India's Radha Yadav to dismiss Delissa Kimmince! ????
WATCH ▶️ https://t.co/rsyZA2z4Ep #INDvAUS #WT20 #WatchThis pic.twitter.com/6r5EQRNmSy
— ICC (@ICC) November 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews