ದುಬೈ: ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಮೂಲಕ 1030 ದಿನಗಳ ಕಾಲ ನಂ.1 ಸ್ಥಾನ ಅಲಂಕರಿಸಿ ಈ ಹಿಂದೆ ವಿರಾಟ್ ಕೊಹ್ಲಿ ಹೆಸರಲಿದ್ದ ದಾಖಲೆಯನ್ನು ಮುರಿದಿದ್ದಾರೆ.
Advertisement
ಈ ಹಿಂದೆ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 1013 ದಿನ ನಂ.1 ಸ್ಥಾನದಲ್ಲಿ ಇದ್ದು ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಇದೀಗ ಬಾಬರ್ ಅಜಮ್ ಪುಡಿಗಟ್ಟಿದ್ದು, ಒಟ್ಟು 1030 ದಿನಗಳ ಕಾಲ ನಂ.1 ಸ್ಥಾನದಲ್ಲಿ ಮುಂದುವರಿದು ನೂತನ ದಾಖಲೆ ಬರೆದಿದ್ದಾರೆ. ಜೊತೆಗೆ ಬ್ಯಾಟಿಂಗ್ ಕಿಂಗ್ ಆಗಿ ಮೆರೆದಾಡಿದ್ದಾರೆ. ಇದನ್ನೂ ಓದಿ: ಚೊಚ್ಚಲ ಶತಕದೊಂದಿಗೆ ಮಿಂಚಿದ ದೀಪಕ್ ಹೂಡಾ – ಐರ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ರೋಚಕ ಜಯ
Advertisement
Advertisement
ಇಂದು ಐಸಿಸಿ ಬಿಡುಗಡೆ ಮಾಡಿರುವ ರ್‍ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ 818 ಅಂಕಗಳೊಂದಿಗೆ ನಂ.1 ಸ್ಥಾನ ಪಡೆದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 794 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ದಕ್ಷಿಣಾ ಆಫ್ರಿಕಾ ತಂಡದ ಮಾರ್ಕ್ರಾಮ್ ಇದ್ದಾರೆ. ಭಾರತೀಯರ ಪೈಕಿ ಇಶಾನ್ ಕಿಶನ್ 682 ಅಂಕಗಳೊಂದಿಗೆ 7 ನೇ ಸ್ಥಾನ ಪಡೆದು ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರನಾಗಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ
Advertisement
Another record for Babar Azam ????
All the changes in this week's @MRFWorldwide men's rankings ????
— ICC (@ICC) June 29, 2022
ವಿರಾಟ್ ಕೊಹ್ಲಿ ರ್‍ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿದ್ದು, ಈ ವರ್ಷ ಕೊಹ್ಲಿ ಕೇವಲ 2 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ ವರ್ಷಕ್ಕೆ 300 ರನ್‍ಗಳನ್ನು ಗಳಿಸಿಲ್ಲ. ಇದರಿಂದಾಗಿ ರ್‍ಯಾಂಕಿಂಗ್ ಕುಸಿತ ಕಂಡಿದೆ.