ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

Public TV
2 Min Read
Team India 9

ಮೊಹಾಲಿ: ವಿಶ್ವಕಪ್‌ಗೂ (World Cup 2023) ಮುನ್ನ ಆರಂಭವಾಗಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿರುವ ಭಾರತ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ನಂ.1 ಸ್ಥಾನಕ್ಕೇರಿದೆ. ಇದರೊಂದಿಗೆ T20 ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲೂ (Test Cricket) ಅಗ್ರಸ್ಥಾನಕೇರಿದ್ದು, ಕ್ರಿಕೆಟ್‌ ಲೋಕದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ.

ಭಾರತ ತಂಡ (Team India) 59 ಪಂದ್ಯಗಳಿಂದ 15,589 ಅಂಕಗಳು ಹಾಗೂ 264 ಶ್ರೇಯಾಂಕದೊಂದಿಗೆ (Rating) ಟಿ20 ಕ್ರಿಕೆಟ್‌ನಲ್ಲಿ, 42 ಪಂದ್ಯಗಳಿಂದ 4,864 ಅಂಕಗಳು ಹಾಗೂ 116 ಶ್ರೇಯಾಂಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಹಾಗೂ 29 ಪಂದ್ಯಗಳಿಂದ 3,434 ಅಂಕಗಳು ಹಾಗೂ 118 ಶ್ರೇಯಾಂಕದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ

ಟಿ20 ಕ್ರಿಕೆಟ್‌ನಲ್ಲಿ ಹಾಲಿ ವಿಶ್ವಕಪ್‌ ಚಾಂಪಿಯನ್‌ ಇಂಗ್ಲೆಂಡ್‌ (England) ತಂಡವು 261 ಶ್ರೇಯಾಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 254 ಶ್ರೇಯಾಂಕದೊಂದಿಗೆ 3ನೇ ಸ್ಥಾನ, 254 ಶ್ರೇಯಾಂಕದೊಂದಿಗೆ ನ್ಯೂಜಿಲೆಂಡ್‌ 4ನೇ ಸ್ಥಾನ ಹಾಗೂ 251 ಶ್ರೇಯಾಂಕದೊಂದಿಗೆ ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.

Untitled 1 copy 1

ಏಕದಿನ ಕ್ರಿಕೆಟ್‌ನಲ್ಲಿ 115 ಶ್ರೇಯಾಂಕದೊಂದಿಗೆ ಪಾಕಿಸ್ತಾನ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 111 ಶ್ರೇಯಾಂಕದೊಂದಿಗೆ 3ನೇ ಸ್ಥಾನದಲ್ಲಿ, ದಕ್ಷಿಣ ಆಫ್ರಿಕಾ 106 ಶ್ರೇಯಾಂಕದೊಂದಿಗೆ 4ನೇ ಸ್ಥಾನದಲ್ಲಿ ಹಾಗೂ ಇಂಗ್ಲೆಂಡ್‌ 105 ಶ್ರೇಯಾಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಗೆದ್ದರೂ ಸೋತರೂ ದುಡ್ಡೋ ದುಡ್ಡು – ಬಹುಮಾನದ ಮೊತ್ತ ಪ್ರಕಟಿಸಿದ ICC

ಟೆಸ್ಟ್‌ ಕ್ರಿಕೆಟ್‌ನಲ್ಲಿ 118 ಶ್ರೇಯಾಂಕದೊಂದಿಗೆ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ 115 ಶ್ರೇಯಾಂಕದೊಂದಿಗೆ 3ನೇ ಸ್ಥಾನ, ದಕ್ಷಿಣ ಆಫ್ರಿಕಾ 104 ಶ್ರೇಯಾಂಕದೊಂದಿಗೆ 4ನೇ ಸ್ಥಾನ ಹಾಗೂ 100 ಶ್ರೇಯಾಂಕದೊಂದಿಗೆ ನ್ಯೂಜಿಲೆಂಡ್‌ 5ನೇ ಸ್ಥಾನದಲ್ಲಿದೆ.

ಸದ್ಯ ಏಕದಿನ ವಿಶ್ವಕಪ್‌‌ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರುವ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಕ್ರಿಕೆಟ್‌ ಸರಣಿಯನ್ನಾಡುತ್ತಿದೆ. ಇದು ವಿಶ್ವಕಪ್‌ ಟೂರ್ನಿಗೆ ಪೂರ್ವ ತಯಾರಿಯೂ ಆಗಿದ್ದು, ಮೊದಲ ಪಂದ್ಯದಲ್ಲೇ 5 ವಿಕೆಟ್‌ಗಳ ಜಯ ಸಾಧಿಸಿದೆ.

Web Stories

Share This Article