ಅಹಮದಾಬಾದ್: ವಿಶ್ವಕಪ್‌ನ (ICC ODI WorldCup) ಭಾರತ-ಪಾಕ್ ನಡುವಿನ ಪಂದ್ಯ ಹಾಗೂ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುವುದು ಖಚಿತಗೊಂಡ ಬೆನ್ನಲ್ಲೇ ನಗರದಲ್ಲಿ ಹೋಟೆಲ್ ರೂಮ್‌ಗಳ ಬೆಲೆ ಗಗನಕ್ಕೇರಿದೆ.
ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ (Hotels) ಒಂದು ರಾತ್ರಿ ಉಳಿಯಲು 6,500-10,000 ರೂ. ಇರುವ ಬೆಲೆ ಅ.13ರಿಂದ 16ರ ನಡುವೆ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ರೂ. ವರೆಗೂ ಏರಿಕೆಯಾಗಿದೆ. ಬೆಲೆ ಗಗನಕ್ಕೇರಿದ್ದರೂ ನಗರದ ಹೋಟೆಲ್‌ಗಳು ಶೇ. 80 ರಷ್ಟು ಮುಂಗಡ ಬುಕಿಂಗ್ ಆಗಿವೆ ಎನ್ನಲಾಗಿದೆ.
Advertisement
Advertisement
ಹೌದು. ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ ತಂಡಗಳ ರಣರೋಚಕ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಮುಂಚಿತವಾಗಿಯೇ ಕ್ರೀಡಾಂಗಣಕ್ಕೆ ಹತ್ತಿರದ ಹೋಟೆಲ್‌ಗಳಲ್ಲಿ (Ahmedabad Hotels) ರೂಮ್‌ಗಳನ್ನ ಬುಕಿಂಗ್ ಮಾಡೋಕೆ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೂಮ್ ಬುಕಿಂಗ್ ಬೆಲೆ ಸಾಮಾನ್ಯ ಅವಧಿಗಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ICC ODI WorldCup: ಈ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಲಿವೆ – ಸೆಹ್ವಾಗ್ ಭವಿಷ್ಯ
Advertisement
Advertisement
ಸಾಮಾನ್ಯ ದಿನಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ರೂಮ್ ಬಾಡಿಗೆ 5 ರಿಂದ 8 ಸಾವಿರ ವರೆಗೆ ಇರುತ್ತಿತ್ತು. ಆದ್ರೆ ಅಕ್ಟೋಬರ್ 15ರ ವೇಳೆ 40 ಸಾವಿರದಿಂದ 1 ಲಕ್ಷಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್
ಹೋಟೆಲ್ ಬುಕಿಂಗ್ ಪೋರ್ಟಲ್ ಪ್ರಕಾರ, ಐಟಿಸಿ ಹೋಟೆಲ್‌ಗಳಲ್ಲಿ ಒಂದು ಡೀಲಕ್ಸ್ ರೂಮಿನ ಬಾಡಿಗೆ 5,699 ರೂ. ಇದ್ದರೆ, ಅಕ್ಟೋಬರ್ 15 ರಂದು ಒಂದು ದಿನಕ್ಕೆ 71,999 ರೂ.ಗೆ ತಲುಪಿದೆ. ಇನ್ನೂ ದಿನಕ್ಕೆ 8 ಸಾವಿರ ರೂ. ಬಾಡಿಗೆ ಪಡೆಯುತ್ತಿದ್ದ ಅಹಮದಾಬಾದ್‌ನ ನವೋದಯ ಹೋಟೆಲ್ ಅ.15ಕ್ಕೆ 90,679 ರೂ. ನಿಗದಿಮಾಡಿದೆ. ಪ್ಲಾಜಾ ಹೋಟೆಲ್‌ಗಳಲ್ಲಿ ದಿನದ ಬಾಡಿಗೆ 36,180 ರೂ.ಗೆ ಹೆಚ್ಚಿದರೆ, ಕೇವಲ 3 ಸಾವಿರ ವಿಧಿಸುತ್ತಿದ್ದ ಜನಸ್ನೇಹಿ ಹೋಟೆಲ್‌ಗಳಲ್ಲಿ ದಿನದ ಬಾಡಿಗೆ 27,233ಕ್ಕೆ ಹೆಚ್ಚಿದೆ. ಹೋಟೆಲ್‌ಗಳ ಬೆಲೆ ದುಬಾರಿಯಾಗಿದ್ದರೂ ಶೇ.80ರಷ್ಟು ಹೋಟೆಲ್‌ಗಳು ಈಗಾಗಲೇ ಬುಕಿಂಗ್ ಆಗಿವೆ. ಐಟಿಸಿ ನರ್ಮದಾ, ಕೋರ್ಟ್‌ಯಾರ್ಡ್‌ನಲ್ಲಿ ಅಕ್ಟೋಬರ್ 15ಕ್ಕೆ ಕೊಠಡಿಗಳು ಬುಕಿಂಗ್ ಫುಲ್ ಆಗಿವೆ ಎಂದು ಮೂಲಗಳು ತಿಳಿಸಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರುವ ಸಾಮರ್ಥ್ಯ ಒಳಗೊಂಡಿದ್ದು, ವಿಶ್ವಕಪ್‌ನ ಐದು ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಆರಂಭಿಕ ಪಂದ್ಯ, ಅಕ್ಟೋಬರ್ 15ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ಹಾಗೂ ಫೈನಲ್ ಪಂದ್ಯ ಸೇರಿ ಒಟ್ಟು 5 ಪಂದ್ಯಗಳು ಇಲ್ಲಿ ನಡೆಯಲಿದೆ.
Web Stories