ವಾಷಿಂಗ್ಟನ್: ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ (ODI WorldCup 2023) ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿಯಿರುವ ಹೊತ್ತಿನಲ್ಲಿ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ (T20 World Cup 2024) ದಿನಾಂಕ ಬಹಿರಂಗಗೊಂಡಿದೆ.
ಮುಂದಿನ ಬಾರಿ ಟಿ20 ವಿಶ್ವಕಪ್ ಚುಟುಕು ಸಮರಕ್ಕೆ ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕ (USA) ಜಂಟಿ ಆತಿಥ್ಯ ವಹಿಸಲಿವೆ. 2022ರ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾ (Australia) ಸಂಪೂರ್ಣ ಆತಿಥ್ಯ ವಹಿಸಿತ್ತು. ಇದನ್ನೂ ಓದಿ: ಇಂಡೋ-ಪಾಕ್ ಕದನಕ್ಕೆ ನವರಾತ್ರಿ ಅಡ್ಡಿಯಾಗುತ್ತಾ? – ಹೈವೋಲ್ಟೇಜ್ ಸಭೆಯಲ್ಲಿ BCCI ಹೇಳಿದ್ದೇನು?
ಮಾಹಿತಿ ಪ್ರಕಾರ, 2024ರ T20 ವಿಶ್ವಕಪ್ ಟೂರ್ನಿಯು ಮುಂದಿನ ಜೂನ್ 4 ರಿಂದ ಜೂನ್ 30ರ ವರೆಗೆ ನಡೆಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿಯೂ ಅಕ್ಟೋಬರ್‌ನಲ್ಲಿ ಟೂರ್ನಿ ಆಯೋಜನೆ ಮಾಡಲಾಗಿತ್ತು. ಈಗಾಗಲೇ ಐಸಿಸಿ ಅಧಿಕಾರಿಗಳು ಅಮೆರಿಕದಲ್ಲಿ ಆತಿಥ್ಯ ವಹಿಸುವ ಸಂಭಾವ್ಯ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಕೆರೆಬಿಯನ್ ಮತ್ತು ಯುಎಸ್‌ನ 10 ಸ್ಥಳಗಳಲ್ಲಿ ವಿಶ್ವಕಪ್ ಟೂರ್ನಿ ಜರುಗಲಿದ್ದು, ಯುನೈಟೆಡ್ ಸ್ಟೇಟ್ಸ್‌ನ ಲಾಡರ್ ಹಿಲ್, ಮೋರಿಸ್ವಿಲ್ಲೆ, ಡಲ್ಲಾಸ್, ನ್ಯೂಯಾರ್ಕ್ ಜೊತೆಗೆ ಫ್ಲೋರಿಡಾದಲ್ಲಿಯೂ ಪಂದ್ಯಗಳನ್ನ ಆಯೋಜಿಸಲಾಗುತ್ತಿದೆ ಎಂದು ತಿಳಿಬಂದಿದೆ.
ಲಾಡರ್‌ಹೀಲ್‌ನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಆಯೋಜನೆಗೊಂಡಿವೆ. ಪ್ರಸ್ತುತ ಮೇಜರ್ ಲೀಗ್ ಕ್ರಿಕೆಟ್ ಕೂಡ ಆಯೋಜನೆಗೊಂಡಿದೆ. ಆದ್ರೆ ಡಲ್ಲಾರ್, ಮಾರಿಸ್ವಿಲ್ಲೆ ಮತ್ತು ನ್ಯೂಯಾರ್ಕ್‌ನ ಸ್ಥಳಗಳು ಐಸಿಸಿಯಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದುಕೊಂಡಿಲ್ಲ. ಹಾಗಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಧಿಕೃತ ಸ್ಥಳಗಳ ಮಾಹಿತಿ ಹೊರಬೀಳಲಿದೆ. ಸದ್ಯ ಏಕದಿನ ವಿಶ್ವಕಪ್ ತಯಾರಿಯಲ್ಲಿರುವ ಬಿಸಿಸಿಐ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಬಾರಿ ಭಾರತದ ಸಂಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯೂ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ರೋಹಿತ್, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?
Web Stories