ಮುಂಬೈ: 2019 ವಿಶ್ವಕಪ್‍ಗೆ ಟೀಂ ಇಂಡಿಯಾ ತಂಡದ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿದ್ದಾರೆ.
2015ರ ವಿಶ್ವಕಪ್ ತಂಡಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೆಹ್ವಾಗ್ 8 ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.
Advertisement
Advertisement
ವಿಶ್ವಕಪ್ ಟೂರ್ನಿ ಮೇ ತಿಂಗಳಿನಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಅಧಿಕೃತ ತಂಡ ಏ.15ಕ್ಕೆ ಘೋಷಣೆಯಾಗುವ ಸಾಧ್ಯತೆ ಇದೆ. ಇತ್ತ ಸೆಹ್ವಾಗ್ ತಮ್ಮ ತಂಡದಲ್ಲಿ ಐವರು ಬ್ಯಾಟ್ಸ್ ಮನ್ ಗಳು, 2 ವಿಕೆಟ್ ಕೀಪರ್ ಗಳು ಸೇರಿದಂತೆ ಮೂವರು ಅಲೌಂಡರ್ ಗಳೊಂದಿಗೆ 5 ಬೌಲರ್ ಗಳನ್ನು ಆಯ್ಕೆ ಮಾಡಿದ್ದಾರೆ.
Advertisement
ಸದ್ಯ ಐಪಿಎಲ್ ಟೂರ್ನಿ ಸಾಗುತ್ತಿರುವ ಹಿನ್ನೆಲೆಯಲ್ಲಿ ತಂಡದ ಎಲ್ಲಾ ಆಟಗಾರರು ಬ್ಯುಸಿಯಾಗಿದ್ದು, ತಂಡದಲ್ಲಿ ಪ್ರಮುಖ 4 ಸ್ಥಾನಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ. ಇತ್ತ ತಂಡದ ಘೋಷಣೆ ಆದ ಬೆನ್ನಲ್ಲೇ ಆಟಗಾರರು ವಿಶ್ವಕಪ್‍ಗೆ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುಲು ಸಾಧ್ಯವಾಗಲಿದೆ.
Advertisement
ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಶಮಿ, ಕೇದಾರ್ ಜಾಧವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಚಹಲ್, ವಿಜಯ್ ಶಂಕರ್, ಬುಮ್ರಾ, ರಿಷಬ್ ಪಂತ್.
ಧೋನಿಗೆ 2-3 ಪಂದ್ಯ ನಿಷೇಧ: ಇದೇ ವೇಳೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ ಬಗ್ಗೆ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ. ಮೈದಾನದಲ್ಲಿ ಇಂತಹ ವರ್ತನೆ ತೋರಿದ ಹಿನ್ನೆಲೆಯಲ್ಲಿ ಧೋನಿ ಅವರಿಗೆ 2 ರಿಂದ 3 ಪಂದ್ಯಗಳ ನಿಷೇಧ ಮಾಡುವುದಕ್ಕೆ ಅರ್ಹ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಕೇವಲ ಪಂದ್ಯದ ಶೇ.50ರಷ್ಟು ಸಂಭಾವನೆಯನ್ನು ಮಾತ್ರ ದಂಡವಾಗಿ ವಿಧಿಸಲಾಗಿದೆ. ಮುಂದಿನ ಅವಧಿಯಲ್ಲಿ ಬೇರೆ ತಂಡದ ನಾಯಕ ಕೂಡ ಇದೇ ರೀತಿ ವರ್ತನೆ ಮಾಡಿದರೆ ಅಂಪೈರ್ ಗಳಿಗೆ ಯಾವ ರೀತಿಯ ಬೆಲೆ ಇರಲಿದೆ ಎಂದು ಪ್ರಶ್ನಿಸಿದ್ದಾರೆ.
My Team India for the 2019 World Cup. 7 players from the 2015 team, 8 replacements ! What is your team ? pic.twitter.com/37QPZ9Z267
— Virender Sehwag (@virendersehwag) April 13, 2019