ನ್ಯೂಜಿಲೆಂಡ್‌ಗೆ 99 ರನ್‌ಗಳ ಭರ್ಜರಿ ಜಯ – ಡಚ್ಚರ ಗೇಮ್‌ ಪ್ಲ್ಯಾನ್‌ಗೆ ಅಭಿಮಾನಿಗಳ ಮೆಚ್ಚುಗೆ

Public TV
2 Min Read
Netherlands players reading paper of plans for each New Zealand batsman

ಹೈದರಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ (ICC World Cup) ನೆದರ್‌ಲ್ಯಾಂಡ್‌ (Netherlands) ವಿರುದ್ಧ 99 ರನ್‌ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್‌ (New Zealand) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿತು. ನೆದರ್‌ಲ್ಯಾಂಡ್‌ ಹೋರಾಟ ನಡೆಸಿ ಕೊನೆಗೆ 46.3 ಓವರ್‌ಗಳಲ್ಲಿ 223 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಪಾಕ್‌ ನಿರೂಪಕಿ ಗಡೀಪಾರು

ನ್ಯೂಜಿಲೆಂಡ್‌ ಪರವಾಗಿ ವಿಲ್‌ ಯಂಗ್‌ 70 ರನ್‌ (80 ಎಸೆತ, 7 ಬೌಂಡರಿ, 2 ಸಿಕ್ಸರ್)‌, ರಚಿನ್‌ ರವೀಂದ್ರ 51 ರನ್‌(51 ಎಸೆತ, 3 ಬೌಂಡರಿ, 1 ಸಿಕ್ಸರ್)‌ ಡ್ಯಾರೆಲ್‌ ಮಿಷೆಲ್‌ 48 ರನ್‌ (47 ಎಸೆತ, 5 ಬೌಂಡರಿ, 2 ಸಿಕ್ಸರ್‌), ನಾಯಕ ಟಾಮ್‌ ಲ್ಯಾಥಮ್‌ 53 ರನ್‌ (46 ಎಸೆತ, 6 ಬೌಂಡರಿ, 1 ಸಿಕ್ಸರ್‌) ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಔಟಾಗದೇ 36 ರನ್‌ (17 ಎಸೆತ, 3 ಬೌಂಡರಿ, 2 ಸಿಕ್ಸರ್‌) ಹೊಡೆದ ಪರಿಣಾಮ ನ್ಯೂಜಿಲೆಂಡ್‌ ಮೊತ್ತ 300 ರನ್‌ಗಳ ಗಡಿ ದಾಟಿತು.

ನೆದರ್‌ಲ್ಯಾಂಡ್‌ ಪರವಾಗಿ ಕಾಲಿನ್‌ ಅಕರ್ಮನ್‌ 69 ರನ್‌ (73 ಎಸೆತ, 5 ಬೌಂಡರಿ), ಸ್ಕಾಟ್ ಎಡ್ವರ್ಡ್ಸ್ 30 ರನ್‌ (27 ಎಸೆತ, 2 ಬೌಂಡರಿ, 1 ಸಿಕ್ಸರ್)‌, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 29 ರನ್‌(34 ಎಸೆತ, 3 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಚೆಲ್ ಸ್ಯಾಂಟ್ನರ್ 5 ವಿಕೆಟ್‌, ಮ್ಯಾಟ್‌ ಹೆನ್ತಿ 3 ವಿಕೆಟ್‌, ರಚಿನ್‌ ರವೀಂದ್ರ 1 ವಿಕೆಟ್‌ ಪಡೆದರು.

ಪೇಪರ್‌ ತಂದ ಡಚ್ಚರು:
ಈ ಪಂದ್ಯವನ್ನು ಗೆಲ್ಲಬೇಕೆಂದು ನೆದರ್‌ಲ್ಯಾಂಡ್‌ ಆಟಗಾರರು ಫೀಲ್ಡಿಂಗ್‌ ವೇಳೆ ಪೇಪರ್‌ ನೋಡಿಕೊಂಡು ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳ ವಿರುದ್ಧ ಗೇಮ್‌ ಪ್ಲ್ಯಾನ್‌ ಮಾಡುತ್ತಿದ್ದರು. ಪಂದ್ಯದ ಮೇಲಿನ ಡಚ್‌ ಆಟಗಾರರ ಈ ಶ್ರದ್ಧೆಯ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

Web Stories

Share This Article