ಜಡೇಜಾ ಸ್ಪಿನ್‌ ಜಾದುಗೆ ಮಕಾಡೆ ಮಲಗಿದ ಹರಿಣರು – ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ

Public TV
3 Min Read
Ind vs SA 5

ಕೋಲ್ಕತ್ತಾ: ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಶತಕದ ಜೊತೆಯಾಟ ಹಾಗೂ ರವೀಂದ್ರ ಜಡೇಜಾ (Ravindra Jadeja) ಸ್ಪಿನ್‌ ಜಾದು ನೆರವಿನಿಂದ ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 243 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ +2.456 ರನ್‌ರೇಟ್‌ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. ಆದ್ರೆ ಕೇವಲ 83 ರನ್‌ಗಳಿಗೆ ಮಕಾಡೆ ಮಲಗಿದ ದಕ್ಷಿಣ ಆಫ್ರಿಕಾ ತಂಡ ಕೇವಲ 83 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ವಿಶ್ವಕಪ್‌ (ICC Cricket World Cup) ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.

ಇಲ್ಲಿನ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 326 ರನ್‌ ಗಳಿಸಿತ್ತು. 327 ರನ್‌ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ (South Africa) ತಂಡ 83 ರನ್‌ಗಳಿಗೆ ಆಲೌಟ್‌ ಆಗಿ ಮಕಾಡೆ ಮಲಗಿತು. ಈ ಪಂದ್ಯದಲ್ಲಿ ಹರಿಣರ ವಿರುದ್ಧ ಸ್ಪಿನ್‌ ದಾಳಿ ನಡೆಸಿದ ಜಡೇಜಾ 9 ಓವರ್‌ನಲ್ಲಿ 33 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಮಿಂಚಿದರು. ಇದರೊಂದಿಗೆ ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲೇ 5 ವಿಕೆಟ್‌ ಪಡೆದ ಎಡಗೈ ಸ್ಪಿನ್ನರ್‌ ಯುವರಾಜ್‌ ಸಿಂಗ್‌(Yuvraj Singh) ಅವರ ದಾಖಲೆಯನ್ನ ಸರಿಗಟ್ಟಿದರು. ಉಳಿದಂತೆ ಮೊಹಮ್ಮದ್‌ ಶಮಿ, ಕುಲ್ದೀಪ್‌ ಯಾದವ್‌ ತಲಾ 2 ವಿಕೆಟ್‌ ಕಿತ್ತರೆ, ಸಿರಾಜ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

Ind vs SA 4

ಉತ್ತಮ ಆರಂಭ ಪಡೆಯವ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡ ಆರಂಭದಿಂದಲೇ ತನ್ನ ಅವನತಿ ಕಂಡಿತು. ಆರಂಭದಿಂದಲೂ ಎಲ್ಲಾ ತಂಡಗಳು ಎದುರು ರನ್‌ ಹೊಳೆ ಹರಿಸಿ ಅಬ್ಬರಿಸಿದ ಶತಕ ವೀರರು ಟೀಂ ಇಂಡಿಯಾ ಬೌಲರ್‌ಗಳ ಎದುರು ಮಣ್ಣುಮುಕ್ಕಿದರು. 6 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಹರಿಣರ ಪಡೆ 63 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತು. ಇದರಿಂದ ಹರಿಣರ ಸೋಲು ಖಚಿತವಾಯಿತು.

Ind vs SA 3

ದಕ್ಷಿಣ ಆಫ್ರಿಕಾದ ಪರ ಕ್ವಿಂಟನ್‌ ಡಿಕಾಕ್‌ (Quinton de Kock) 5 ರನ್‌, ತೆಂಬಾ ಬವುಮಾ (Temba Bavuma) 11 ರನ್‌, ರಾಸಿ ವಾನ್‌ ಡೇರ್‌ ಡುಸ್ಸೆನ್‌ 13 ರನ್‌, ಏಡನ್‌ ಮಾರ್ಕ್ರಮ್‌ 9 ರನ್‌, ಹೆನ್ರಿಚ್‌ ಕ್ಲಾಸೆನ್‌ 1 ರನ್‌. ಡೇವಿಡ್‌ ಮಿಲ್ಲರ್‌ 11 ರನ್‌, ಮಾರ್ಕೋ ಜಾನ್ಸೆನ್‌ 14 ರನ್‌, ಕೇಶವ್‌ ಮಹರಾಜ್‌ 7 ರನ್‌, ಕಾಗಿಸೊ ರಬಾಡ 6 ರನ್‌, ತಬ್ರಿಝಿ ಶಂಸಿ 4 ರನ್‌ ಗಳಿಸಿದ್ರೆ ಕ್ರೀಸ್‌ನಲ್ಲಿ ಉಳಿದರೆ, ಲುಂಗಿ ಎನ್ಗಿಡಿ ಶೂನ್ಯ ಸುತ್ತಿದರು.

Ind vs SA 2

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಿಂಗ್ ಕೊ‌ಹ್ಲಿ ಶತಕ ಹಾಗೂ ಶ್ರೇಯಸ್ ಅಯ್ಯರ್ ಭರ್ಜರಿ ಅರ್ಧಶತಕದ ನೆರವಿನೊಂದಿಗೆ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲೇ 62 ರನ್ ಬಾರಿಸುವ ಮೂಲಕ ಸ್ಫೋಟಕ ಆರಂಭ ನೀಡಿತ್ತು. ಆದ್ರೆ ಅಷ್ಟರಲ್ಲೇ ಹಿಟ್‌ಮ್ಯಾನ್ 40 ರನ್ (24 ಎಸೆತ, 6 ಬೌಂಡರಿ, 2 ಸಿಕ್ಸರ್) ಬಾರಿಸಿ ಔಟಾದರು. ಈ ಬೆನ್ನಲ್ಲೇ ಶುಭಮನ್ ಗಿಲ್ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

Ind vs SA 1

ನಂತರ 3ನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹರಿಣರ ಪಡೆಯನ್ನು ಹಿಗ್ಗಾಮುಗ್ಗ ಬೆಂಡೆತ್ತಿದರು. ಶ್ರೇಯಸ್ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದರು. ನಂತರ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಅರ್ಧಶತಕ ಗಳಿಸಿ ಪೆವಿಯನ್‌ಗೆ ಮರಳಿದರು. ಅಯ್ಯರ್ ಮತ್ತು ಕೊಹ್ಲಿ ಜೋಡಿ 3ನೇ ವಿಕೆಟ್‌ಗೆ 158 ಎಸೆತಗಳಲ್ಲಿ 138 ರನ್ ಜೊತೆಯಾಟ ನೀಡಿತು. ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಕೊಹ್ಲಿಯ 41 ರನ್‌ಗಳ ಜೊತೆಯಾಟವೂ ತಂಡದ ಮೊತ್ತ 300ರ ಗಡಿದಾಟಲು ನೆರವಾಯಿತು.

Team India 1

ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ 77 ರನ್ (87 ಎಸೆತ, 7 ಬೌಂಡರಿ, 2 ಸಿಕ್ಸರ್), ಕೆ.ಎಲ್ ರಾಹುಲ್ 8 ರನ್, ಸೂರ್ಯಕುಮಾರ್ ಯಾದವ್ 22 ರನ್, ರವೀಂದ್ರ ಜಡೇಜಾ 29 ರನ್ ಗಳಿಸಿ ಮಿಂಚಿದರು. ಇದಲ್ಲದೇ ಟೀಂ ಇಂಡಿಯಾಕ್ಕೆ ವೈಡ್, ನೋಬಾಲ್ ಸೇರಿದಂತೆ ಹೆಚ್ಚುವರಿಯಾಗಿಯೇ 26 ರನ್ ಸೇರ್ಪಡೆಯಾಯಿತು.

ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ ಮಹಾರಾಜರು, ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದರು.

Share This Article