Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!

Public TV
Last updated: November 12, 2023 10:09 pm
Public TV
Share
4 Min Read
Ind vs NED
SHARE

ಬೆಂಗಳೂರು: ಅಗ್ರಕ್ರಮಾಂಕದ ಬ್ಯಾಟರ್‌ಗಳ ಸ್ಪೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ದಾಳಿ ನೆರವಿನೊಂದಿಗೆ ಟೀಂ ಇಂಡಿಯಾ (Team India), ನೆದರ್ಲೆಂಡ್ಸ್‌ ವಿರುದ್ಧ 160 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2023ರ ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಯ ಲೀಗ್‌ ಪಂದ್ಯವು ಟೀಂ ಇಂಡಿಯಾದ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 410 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್‌ (Netherlands) 47.5 ಓವರ್‌ಗಳಲ್ಲೇ 250 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 2023ರ ವಿಶ್ವಕಪ್‌ಗೆ ಸೋಲಿನೊಂದಿಗೆ ಭಾವುಕ ವಿದಾಯ ಹೇಳಿತು.

India post their 2nd highest World Cup score in history.

This Indian team. ???????? pic.twitter.com/lHC2Zvhn1u

— Mufaddal Vohra (@mufaddal_vohra) November 12, 2023

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಟೀಂ ಇಂಡಿಯಾದ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. 2023ನೇ ಸಾಲಿನಲ್ಲಿ ಭಾರತ 8 ಬಾರಿ 350ಕ್ಕಿಂತ ಹೆಚ್ಚು ರನ್ ಗಳಿಸಿ ದಾಖಲೆ ಬರೆಯಿತು. ಅಲ್ಲದೇ ಇದು ಟೀಂ ಇಂಡಿಯಾ ವಿಶ್ವಕಪ್‌ ಟೂರ್ನಿಯಲ್ಲಿ ಗಳಿಸಿದ 2ನೇ ಗರಿಷ್ಠ ಸ್ಕೋರ್‌ (2nd Highest World Cup Score in History) ಸಹ ಆಗಿದೆ. 2007ರ ವಿಶ್ವಕಪ್‌ನಲ್ಲಿ ಭಾರತ ಬರ್ಮುಡಾ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 413 ರನ್‌ ಗಳಿಸಿದ್ದು, ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ಆಗಿದೆ. ಅಷ್ಟೇ ಅಲ್ಲದೇ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೇ ಆರಂಭಿಕನಾಗಿಯೇ 14 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಒಟ್ಟು 60 ಸಿಕ್ಸರ್‌ ಸಿಡಿಸುವ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ ನಂ.1 ಆಟಗಾರ ಸಹ ಎನಿಸಿಕೊಂಡರು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನ ಪೂರೈಸಿದರು. ಇನ್ನೂ ಕೆ.ಎಲ್‌ ರಾಹುಲ್‌ 62 ಎಸೆತಗಳಲ್ಲೇ ಶತಕ ಸಿಡಿಸಿ ವೇಗದ ಶತಕ ಸಿಡಿಸಿದ ಟಾಪ್‌-1 ದಿಗ್ಗಜರ ಎಲೈಟ್‌ ಪಟ್ಟಿ ಸೇರಿದರು.

KL Raul Hundred

ಚೇಸಿಂಗ್‌ ಆರಂಭಿಸಿದ ನೆದರ್ಲೆಂಡ್ಸ್‌ ಬ್ಯಾಟರ್‌ಗಳು ಆರಂಭದಲ್ಲೇ ಭಾರತದ ಬೌಲರ್‌ಗಳ ದಾಳಿಗೆ ತುತ್ತಾದರು. ಇದರ ಹೊರತಾಗಿಯೂ ಟೀಂ ಇಂಡಿಯಾ ವಿರುದ್ಧ ಕೊನೆಯವರೆಗೂ ಹೋರಾಡಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ತೇಜ ನಿಡಮನೂರು 39 ಎಸೆತಗಳಲ್ಲಿ 54‌ ರನ್‌ (6 ಸಿಕ್ಸರ್‌, 1 ಬೌಂಡರಿ) ಗಳಿಸಿದ್ರೆ, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 45 ರನ್‌ (4 ಬೌಂಡರಿ, 80 ಎಸೆತ, ಕಾಲಿನ್ ಅಕರ್ಮನ್ 35 ರನ್‌ (32 ಎಸೆತ, 6 ಬೌಂಡರಿ) ಗಳಿಸಿದ್ದು ಬಿಟ್ಟರೆ ಉಳಿದ ಯಾರೋಬ್ಬರು ಹೆಚ್ಚುಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಟೀಂ ಇಂಡಿಯಾ ಸುಲಭವಾಗಿ 160 ರನ್‌ಗಳ ಜಯ ಸಾಧಿಸಿತು.

KL RAHUL 2

ನೆದರ್ಲೆಂಡ್ಸ್‌ ಪರ ವೆಸ್ಲಿ ಬ್ಯಾರೆಸಿ, 4 ರನ್‌, ಮ್ಯಾಕ್ಸ್ ಒ’ಡೌಡ್ 30 ರನ್‌, ಸ್ಕಾಟ್ ಎಡ್ವರ್ಡ್ಸ್ 17 ರನ್‌, ಬಾಸ್ ಡಿ ಲೀಡೆ 12 ರನ್‌, ಲೋಗನ್ ವ್ಯಾನ್ ಬೀಕ್ 16 ರನ್‌, ರೋಲೋಫ್ ವ್ಯಾನ್ ಡೆರ್ ಮೆರ್ವೆ 16 ರನ್‌, ಆರ್ಯನ್ ದತ್ 5 ರನ್‌ ಗಳಿಸಿದ್ರೆ, ಪಾಲ್ ವ್ಯಾನ್ ಮೀಕೆರೆನ್ 3 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಟೀಂ ಇಂಡಿಯಾ ಪರ ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌, ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಪಡೆದರೆ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Netherlands

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 40 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿತ್ತು. ಆದ್ರೆ ಕೆ.ಎಲ್‌ ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೊನೆಯ 10 ಓವರ್‌ಗಳಲ್ಲಿ 125 ರನ್‌ ದಾಖಲಾಯಿತು.

ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ರೋಹಿತ್‌ ಶರ್ಮಾ (Rohit Sharma) ಮತ್ತು ಶುಭಮನ್‌ ಗಿಲ್‌ (Shubman Gill) ಜೋಡಿ ಮೊದಲ ವಿಕೆಟ್‌ಗೆ 71 ಎಸೆತಗಳಲ್ಲಿ 100 ರನ್‌ ಬಾರಿಸಿತ್ತು. ಈ ಜೋಡಿ ವಿಕೆಟ್‌ ಬೀಳುತ್ತಿದ್ದಂತೆ 3ನೇ ವಿಕೆಟ್‌ಗೆ ಶ್ರೇಯಸ್‌ ಅಯ್ಯರ್‌ ಮತ್ತು ಕೊಹ್ಲಿ (Virat Kohli) 66 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದ್ರು. ಬಳಿಕ ದ್ವಿಶತಕ ಜೊತೆಯಾಟ ನೀಡಿದ ಕೆ.ಎಲ್‌ ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಜೋಡಿ 128 ಎಸೆತಗಳಲ್ಲಿ ಬರೋಬ್ಬರಿ 208 ರನ್‌ ಬಾರಿಸಿತ್ತು. ಇದರಿಂದ ತಂಡದ ಮೊತ್ತ 400 ರನ್‌ಗಳ ಗಡಿ ದಾಟಲು ನೆರವಾಯಿತು. ಅಂತಿಮವಾಗಿ ಭಾರತ 4 ವಿಕೆಟ್‌ ನಷ್ಟಕ್ಕೆ 410 ರನ್‌ ಬಾರಿಸಿತು.

ಭಾರತದ ಪರ ಶ್ರೇಯಸ್‌ ಅಯ್ಯರ್‌ 128 ರನ್‌ (94 ಎಸೆತ, 10 ಬೌಂಡರಿ, 5 ಸಿಕ್ಸರ್)‌, ಕೆ.ಎಲ್‌ ರಾಹುಲ್‌ 102 ರನ್‌ (64 ಎಸೆತ, 11 ಬೌಂಡರಿ, 4 ಸಿಕ್ಸರ್)‌, ರೋಹಿತ್‌ ಶರ್ಮಾ 61 ರನ್‌ (54 ಎಸೆತ, 8 ಬೌಂಡರಿ, 2 ಸಿಕ್ಸರ್‌), ಶುಭಮನ್‌ ಗಿಲ್‌ 51 ರನ್‌ (32 ಎಸೆತ, 4 ಸಿಕ್ಸರ್‌, 3 ಬೌಂಡರಿ), ವಿರಾಟ್‌ ಕೊಹ್ಲಿ 51 ರನ್‌ (5 ಬೌಂಡರಿ, 1 ಸಿಕ್ಸರ್‌) ಚಚ್ಚಿದರೆ, ಸೂರ್ಯಕುಮಾರ್‌ ಯಾದವ್‌ 2 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ನೆದರ್ಲೆಂಡ್ಸ್‌ ಪರ ಬಾಸ್ ಡಿ ಲೀಡೆ 10 ಓವರ್‌ಗಳಲ್ಲಿ 82 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರೆ, ಪಾಲ್ ವ್ಯಾನ್ ಮೀಕೆರೆನ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದೊಂದು ವಿಕೆಟ್‌ ಪಡೆದರು.

TAGGED:KL RahulNetherlandsRO_KORohit SharmaShreyas IyerShubman GillSuryakumar YadavTeam indiavirat kohliWorld Cup 2023ಟೀಂ ಇಂಡಿಯಾನೆದರ್ಲೆಂಡ್ಸ್ರೋಹಿತ್ ಶರ್ಮಾವಿರಾಟ್ ಕೊಹ್ಲಿವಿಶ್ವಕಪ್ಸ್ಕಾಟ್ ಎಡ್ವರ್ಡ್ಸ್
Share This Article
Facebook Whatsapp Whatsapp Telegram

Cinema Updates

Shivarajkumar Kamal Haasan
ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ
3 hours ago
darshan 1
ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
6 hours ago
RASHMIKA
ಸೀರೆಯಲ್ಲಿ ಮಿಂಚು ಬಳ್ಳಿಯಂತೆ ಕಂಗೊಳಿಸಿದ ರಶ್ಮಿಕಾ – ವಿಜಯ್‌ ಕ್ಲಿಕ್‌ ಮಾಡಿದ್ದು ಅಂದ್ರು ಫ್ಯಾನ್ಸ್‌!
7 hours ago
akhil akkineni
ಜೂನ್‌ನಲ್ಲಿ ಝೈನಾಬ್ ಜೊತೆ ಅಖಿಲ್ ಅಕ್ಕಿನೇನಿ ಮದುವೆ?
8 hours ago

You Might Also Like

Uttar Pradesh Operation Langda
Latest

ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

Public TV
By Public TV
42 minutes ago
Hassan Student Heart Attack
Crime

Hassan | ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

Public TV
By Public TV
57 minutes ago
Thawar Chand Gehlot
Bengaluru City

ಮುಸ್ಲಿಮರಿಗೆ 4%ರಷ್ಟು ಗುತ್ತಿಗೆ ಮೀಸಲಿಗೆ ಒಪ್ಪದ ಗವರ್ನರ್ – ರಾಷ್ಟ್ರಪತಿಗಳ ಅಂಗಳಕ್ಕೆ ರವಾನೆ?

Public TV
By Public TV
3 hours ago
Madhabi Puri Buch
Latest

ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

Public TV
By Public TV
3 hours ago
Shashi Tharoor 1
Latest

ಶಶಿ ತರೂರ್ ಬಿಜೆಪಿಯ ಸೂಪರ್ ವಕ್ತಾರ ಆಗಿದ್ದಾರೆ: ಕಾಂಗ್ರೆಸ್ ಕಿಡಿ

Public TV
By Public TV
4 hours ago
Rishabh Pant 4
Cricket

RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?