– 10 ರನ್‌ಗಳ ಅಂತರದಲ್ಲೇ 4 ವಿಕೆಟ್ ಉಡೀಸ್
ಲಕ್ನೋ: ಮೊಹಮ್ಮದ್ ಶಮಿ (Mohammed Shami), ಜಸ್ಪ್ರೀತ್ ಬುಮ್ರಾ (Jasprit Bumrah) ಬೆಂಕಿ ಬೌಲಿಂಗ್ ದಾಳಿ ನೆರವಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ನಂತ್ರ ವಿಶ್ವಕಪ್ ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಹಾಕಿಕೊಂಡಿದೆ. ಜೊತೆಗೆ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
India ruling at the Top of the table.
England at No.10 position. pic.twitter.com/FfFPN9pVdc
— Mufaddal Vohra (@mufaddal_vohra) October 29, 2023
Advertisement
ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್ (England) ಎದುರು ವಿರೋಚಿತ ಸೋಲನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ (India) ಗೆಲುವು ಸಿಕ್ಕಿರಲಿಲ್ಲ. ಇಂದು 100 ರನ್‌ಗಳ ಭರ್ಜರಿ ಜಯದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ.
Advertisement
India have won 27 matches of the last 31 World Cup games since 2011.
– This is team India at their very best…!!! ???????? pic.twitter.com/idPZcHIR7c
— Mufaddal Vohra (@mufaddal_vohra) October 29, 2023
Advertisement
ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ನಾಲ್ಕು ಓವರ್‌ಗಳಲ್ಲೇ 26 ರನ್ ಬಾರಿಸಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆದ್ರೆ 5ನೇ ಓವರ್‌ನಲ್ಲಿ ಬುಮ್ರಾ ಮಾರಕ ದಾಳಿಯಿಂದ ಎರಡು ವಿಕೆಟ್ ಕಿತ್ತರು. ಈ ಬೆನ್ನಲ್ಲೇ ಶಮಿ ಕೂಡ ಮಾರಕದಾಳಿ ಮುಂದುವರಿಸಿದ್ದರಿಂದ ಇಂಗ್ಲೆಂಡ್ 10 ರನ್‌ಗಳ ಅಂತರದಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದು ತಂಡಕ್ಕೆ ಸೋಲಿನ ಮುನ್ಸೂಚನೆ ನೀಡಿತು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ 25 ಓವರ್‌ಗಳಲ್ಲಿ 6 ವಿಕೆಟ್‌ಗೆ ಕೇವಲ 84 ರನ್ ಗಳಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಇಂಗ್ಲೆಂಡ್ ಅಂತಿಮವಾಗಿ 129 ರನ್‌ಗಳಿಗೆ ಸರ್ವಪತನ ಕಂಡಿತು.
Advertisement
6 matches.
6 wins.
Team India is simply unstoppable in the 2023 World Cup. pic.twitter.com/adeHXmJdjZ
— Mufaddal Vohra (@mufaddal_vohra) October 29, 2023
ಇಂಗ್ಲೆಂಡ್ ಪರ ಜಾನಿ ಬೈರ್ಸ್ಟೋವ್ 14 ರನ್, ಡೇವಿಡ್ ಮಲಾನ್ 16 ರನ್ ಗಳಿಸಿದ್ರೆ ಜೋ ರೂಟ್, ಬೆನ್‌ಸ್ಟೋಕ್ಸ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ನಂತರ ಜೋಸ್ ಬಟ್ಲರ್ (Jos Buttler) 10 ರನ್, ಮೊಯಿನ್ ಅಲಿ 15 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 27 ರನ್, ಕ್ರಿಸ್‌ವೋಕ್ಸ್ 10 ರನ್ ಗಳಿಸಿದ್ರೆ, ಕೊನೆಯಲ್ಲಿ ಆದಿಲ್ ರಶೀದ್ 13 ರನ್ ಗಳಿಸಿದ್ರೆ, ಮಾರ್ಕ್‌ವುಡ್ ಶೂನ್ಯಕ್ಕೆ ಔಟಾದರು. ಡೇವಿಡ್ ವಿಲ್ಲಿ (David Willey) 13 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ (Team India), ಇಂಗ್ಲೆಂಡ್ ತಂಡಕ್ಕೆ 230 ರನ್‌ಗಳ ಗುರಿ ನೀಡಿತ್ತು. ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿದ್ದ ಭಾರತಕ್ಕೆ ಆರಂಭದಲ್ಲೇ ನಿರಾಸೆಯಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್ ಗಿಲ್, ವಿರಾಟ್ ಕೊಹ್ಲಿ (Virat Kohli), ಶ್ರೇಯಸ್ ಅಯ್ಯರ್ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಶುಭಮನ್ ಗಿಲ್ 9 ರನ್, ಶ್ರೇಯಸ್ ಅಯ್ಯರ್ 4 ರನ್ ಗಳಿಸಿದ್ರೆ, ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್ ಗಳಿಸದೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್ ರಾಹುಲ್ 58 ಎಸೆತಗಳಲ್ಲಿ 39 ರನ್ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್ ಕಳೆದುಕೊಂಡಿತು.
ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್ ಶರ್ಮಾ 101 ಎಸೆತಗಳಲ್ಲಿ 87 ರನ್ (3 ಸಿಕ್ಸರ್, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 49 ರನ್ (1 ಸಿಕ್ಸರ್, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ 16 ರನ್, ರವೀಂದ್ರ ಜಡೇಜಾ 8 ರನ್, ಮೊಹಮ್ಮದ್ ಶಮಿ 1 ರನ್ ಗಳಿಸಿದ್ರೆ, ಕುಲ್ದೀಪ್ ಯಾದವ್ 9 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್ ಕಿತ್ತರೆ, ಕ್ರಿಸ್ ವೋಕ್ಸ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಹಾಗೂ ಮಾರ್ಕ್‌ವುಡ್ ಒಂದು ವಿಕೆಟ್ ಪಡೆದು ಮಿಂಚಿದರು.
Web Stories