World Cup 2023: ಡಿಕಾಕ್‌ ಡಿಚ್ಚಿಗೆ ಬಾಂಗ್ಲಾ ಬರ್ನ್‌ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು

Public TV
3 Min Read
Quinton de Kock 1

ಮುಂಬೈ: ಕ್ವಿಂಟನ್‌ ಡಿಕಾಕ್‌ (Quinton de Kock), ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಸ್ಫೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 149 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. 5ರಲ್ಲಿ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್‌ ತಂಡ 3ನೇ ಸ್ಥಾನಕ್ಕೆ ಕುಸಿದಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ (South Africa) ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 382 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ (Bangladesh) ತಂಡವು 46.4 ಓವರ್‌ಗಳಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ನಮ್ಮನ್ನು ಕ್ಷಮಿಸಿಬಿಡಿ ಪಾಕಿಸ್ತಾನ – ಅಫ್ಘಾನ್‌ ವಿರುದ್ಧ ಸೋಲಿನ ಬಳಿಕ ಅಬ್ದುಲ್ಲಾ ಶಫೀಕ್ ಭಾವುಕ ಟ್ವೀಟ್‌

SA VS BAN

ಚೇಸಿಂಗ್‌ ಆರಂಭಿಸಿದ ಬಾಂಗ್ಲಾದೇಶ ತಂಡವು ಆರಂಭದಲ್ಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 6 ಓವರ್‌ಗಳಲ್ಲಿ 30 ರನ್‌ಗಳಿಸಿ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ್ದ ಬಾಂಗ್ಲಾದೇಶ ಬಳಿಕ ಒಂದೊಂದೇ ವಿಕೆಟ್‌ಗಳನ್ನ ಕಳೆದುಕೊಂಡಿತು. ಕೇವಲ 16 ರನ್‌ಗಳ ಅಂತರದಲ್ಲೇ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತು. ಇಲ್ಲಿಂದ ಬಾಂಗ್ಲಾದ ಅವನತಿ ಶುರುವಾಯಿತು. 12ನೇ ಓವರ್‌ನಲ್ಲಿ 46 ರನ್‌ ಗಳಿಸಿದ್ದ ತಂಡ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಾಯಕ ಶಕೀಬ್‌ ಅಲ್‌ ಹಸನ್‌ ಕೂಡ 1 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು. ಇದನ್ನೂ ಓದಿ: Record Break: ಭಾರತ-ಕಿವೀಸ್‌ ರೋಚಕ ಪಂದ್ಯಕ್ಕೆ ಗ್ರೌಂಡ್‌ ಹೊರಗಿನ ದಾಖಲೆಗಳೂ ಉಡೀಸ್‌

Heinrich Klaasen David Miller

ಮೊಹಮ್ಮದುಲ್ಲಾ ಶತಕ ಹೋರಾಟ ವ್ಯರ್ಥ: ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದುಲ್ಲಾ ಕೊನೆಯವರೆಗೂ ಹೋರಾಡಿ ಶತಕ ಗಳಿಸಿದರೂ ವ್ಯರ್ಥವಾಯಿತು. ಮೊಹಮ್ಮದುಲ್ಲಾ 111 ಎಸೆತಗಳಲ್ಲಿ 111 ರನ್‌ (11 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾಗುತ್ತಿದ್ದಂತೆ, ಉಳಿದ ಎರಡೂ ವಿಕೆಟ್‌ಗಳು ಪತನಗೊಂಡಿತು. ಅಂತಿಮವಾಗಿ ಬಾಂಗ್ಲಾದೇಶ 46.4 ಓವರ್‌ಗಳಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

South Africa 4

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾ ಬೌಲರ್‌ಗಳನ್ನು ಚೆಂಡಾಡಿತ್ತು. ಆರಂಭದಲ್ಲಿ ಎರಡು ವಿಕೆಟ್‌ ಕಳಡೆದುಕೊಂಡರೂ ಬಳಿಕ ಉತ್ತಮ ರನ್‌ ಪೇರಿಸುವಲ್ಲಿ ತಂಡ ಯಶಸ್ವಿಯಾಯಿತು. ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ ಕ್ವಿಂಟನ್‌ ಡಿಕಾಕ್‌ 140 ಎಸೆತಗಳಲ್ಲಿ 174 ರನ್‌ (7 ಸಿಕ್ಸರ್‌, 15 ಬೌಂಡರಿ) ಚಚ್ಚಿದರೆ, ನಾಯಕ ಏಡನ್‌ ಮಾರ್ಕ್ರಮ್‌ 69 ಎಸೆತಗಳಲ್ಲಿ 60 ರನ್‌, ಹೆನ್ರಿಚ್‌ ಕ್ಲಾಸೆನ್‌ 49 ಎಸೆತಗಳಲ್ಲಿ ಸ್ಫೋಟಕ 90 ರನ್‌ (8 ಸಿಕ್ಸರ್‌, 2 ಬೌಂಡರಿ), ಡೇವಿಡ್‌ ಮಿಲ್ಲರ್‌ 15 ಎಸೆತಗಳಲ್ಲಿ 34 ರನ್‌ (4 ಸಿಕ್ಸರ್‌, 1 ಬೌಂಡರಿ) ಬಾರಿಸಿ 350 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್, ಲಿಜಾಡ್ ವಿಲಿಯಮ್ಸ್, ಕಗಿಸೊ ರಬಾಡ ತಲಾ ಎರಡು ವಿಕೆಟ್‌ ಕಿತ್ತರೆ, ಜೆರಾಲ್ಡ್ ಕೊಯೆಟ್ಜಿ 3 ವಿಕೆಟ್‌ ಹಾಗೂ ಕೇಶವ್ ಮಹಾರಾಜ್ ಒಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

Web Stories

Share This Article