ಲಾಹೋರ್: ಅಫ್ಘಾನಿಸ್ತಾನ (Afghanistan) ಬ್ಯಾಟ್ಸ್‌ಮನ್, ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ (Ibrahim Zadran) ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy) ವಿಶ್ವ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ (England) ವಿರುದ್ಧ 177 ರನ್ ಹೊಡೆಯುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಜದ್ರಾನ್ ಪಾತ್ರವಾಗಿದ್ದಾರೆ.
177 ರನ್ (146 ಎಸೆತ, 12 ಬೌಂಡರಿ, 6 ಸಿಕ್ಸರ್) ಹೊಡೆದ ಜದ್ರಾನ್ 50ನೇ ಓವರಿನ ಮೊದಲ ಎಸೆತದಲ್ಲಿ ಔಟಾದರು. 65 ಎಸೆತದಲ್ಲಿ ಅರ್ಧಶತಕ ಹೊಡೆದ ಜದ್ರಾನ್ 106 ಎಸೆತಗಳಲ್ಲಿ ಶತಕ ಭಾರಿಸಿದರು. 134 ಎಸೆತಗಳಲ್ಲಿ 150 ರನ್ ಚಚ್ಚಿದರು.
Advertisement
🚨 HISTORY CREATED BY ZADRAN. 🚨
– Ibrahim Zadran has the highest individual score in Champions Trophy. pic.twitter.com/FQAZwXWc1y
— Mufaddal Vohra (@mufaddal_vohra) February 26, 2025
Advertisement
ಅತಿ ಹೆಚ್ಚು ರನ್ ದಾಖಲೆ
ಇಬ್ರಾಹಿಂ ಜದ್ರಾನ್ ಮೊದಲ ಸ್ಥಾನದಲ್ಲಿದ್ದರೆ ಇಂಗ್ಲೆಂಡಿನ ಬೆನ್ ಡಕೆಟ್ ಎರಡನೇ ಸ್ಥಾನದಲ್ಲಿ ಇದ್ದಾರೆ. ಈ ಟೂರ್ನಿಯಲ್ಲೇ ಆಸ್ಟ್ರೇಲಿಯಾದ ವಿರುದ್ಧ 143 ಎಸೆತಗಳಲ್ಲಿ 165 ರನ್ ಹೊಡೆದಿದ್ದರು. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡಿನ ನಥನ್ ಆಸ್ಟ್ಲೆ, ನಾಲ್ಕನೇ ಸ್ಥಾನದಲ್ಲಿ ಜಿಂಬಾಬ್ವೆಯ ಆಂಡಿ ಫ್ಲವರ್, ಐದನೇ ಸ್ಥಾನದಲ್ಲಿ ಭಾರತದ ಸೌರವ್ ಗಂಗೂಲಿ ಇದ್ದಾರೆ.
Advertisement
ಇಬ್ಲಾಹಿಂ ಜದ್ರಾನ್ – ಅಫ್ಘಾನಿಸ್ತಾನ – 177 ರನ್, 2025
ಬೆನ್ ಡಕೆಟ್ – ಇಂಗ್ಲೆಂಡ್ – 165 ರನ್ (143 ಎಸೆತ) – 2025
ನಾಥನ್ ಆಸ್ಟಲ್ – ನ್ಯೂಜಿಲೆಂಡ್ – 145 ರನ್ (151 ಎಸೆತ) – 2004
ಆಂಡಿ ಫ್ಲವರ್ – ಜಿಂಬಾಬ್ವೆ – 145 ರನ್ (164 ಎಸೆತ) – 2002
ಸೌರವ್ ಗಂಗೂಲಿ – ಭಾರತ – 141 ರನ್ (142 ಎಸೆತ) – 2000
ಸಚಿನ್ ತೆಂಡೂಲ್ಕರ್- ಭಾರತ – 141 ರನ್ (128 ಎಸೆತ) – 1998
Advertisement
A 💯 so brilliant that even the opponents are clapping for Ibra-HIM! 👏
And with that, #IbrahimZadran jumps to the 2nd spot, among players to score most ODI centuries for Afghanistan in ODIs (after #RahmanullahGurbaz)#ChampionsTrophyOnJioStar 👉 #AFGvENG | LIVE NOW on Star… pic.twitter.com/x5wE6dOUAW
— Star Sports (@StarSportsIndia) February 26, 2025
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಆಫ್ಘಾನಿಸ್ಥಾನ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 325 ರನ್ ಹೊಡೆದಿದೆ. 37 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 40 ರನ್(67 ಎಸೆತ), ಅಜ್ಮತುಲ್ಲಾ ಒಮರ್ಜಾಯ್ 41 ರನ್ (31 ಎಸೆತ, 1 ಬೌಂಡರಿ, 3 ಸಿಕ್ಸರ್), ಮೊಹಮ್ಮದ್ ನಬಿ 40 ರನ್ (24 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 300 ರನ್‌ಗಳ ಗಡಿ ದಾಟಿತು. ಜದ್ರಾನ್ ಮತ್ತು ನಬಿ 55 ಎಸೆತಗಳಲ್ಲಿ 111 ರನ್ ಜೊತೆಯಾಟವಾಡಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಕೊನೆಯ 9 ಓವರ್‌ಗಳಲ್ಲಿ ಅಫ್ಘಾನಿಸ್ತಾನ 108 ರನ್ ಹೊಡೆದಿತ್ತು.
ಯಾವ ಓವರ್ ಎಷ್ಟು ರನ್?
42ನೇ ಓವರ್ – 10 ರನ್‌ಗಳು
43ನೇ ಓವರ್ – 9 ರನ್‌ಗಳು
44ನೇ ಓವರ್ – 20 ರನ್‌ಗಳು
45ನೇ ಓವರ್ – 10 ರನ್‌ಗಳು
46ನೇ ಓವರ್ – 10 ರನ್‌ಗಳು
47ನೇ ಓವರ್ – 23 ರನ್‌ಗಳು
48ನೇ ಓವರ್ – 10 ರನ್‌ಗಳು
49ನೇ ಓವರ್ – 14 ರನ್‌ಗಳು
50ನೇ ಓವರ್ – 2 ರನ್‌ಗಳು