ಚಾಮರಾಜನಗರ: ಅತೃಪ್ತರಿಗೆ ಸ್ಥಾನಮಾನ ನೀಡುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮೈತ್ರಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನಮಾನ ನೀಡಿದೆ. ಸಮ್ಮಿಶ್ರ ಸರ್ಕಾರದ ಇನ್ನುಳಿದ ಶಾಸಕರಿಗೆ ಅಥವಾ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸ್ಥಾನಮಾನ ನೀಡಲು ಹೈಕಮಾಂಡ್ ಸೂಚಿಸಿದರೆ ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷವೇ ನನಗೆ ಸುಪ್ರೀಂ, ಕೇಳಿದ್ರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ: ಡಿಕೆಶಿ
Advertisement
Advertisement
ರಾಜೀನಾಮೆ ನೀಡು ಅಂತ ಕಾಂಗ್ರೆಸ್ ಹೈಕಮಾಂಡ್ ಹೇಳಿದರೆ ನಾನು ಸಿದ್ಧನಿದ್ದೇನೆ. ನಾಳೆಯೇ ರಾಜೀನಾಮೆ ನೀಡು ಅಂತ ಸೂಚಿಸಿದರೆ ನಾಳೆಯೇ ನನ್ನ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ಇದರಲ್ಲಿ ಯಾವುದೇ ತ್ಯಾಗದ ಪ್ರಶ್ನೆ ಇಲ್ಲ. ಇಂತಹ ವಿಷಯಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದು ಹೈಕಮಾಂಡ್ ಹಕ್ಕು. ಅಧಿಕಾರ ನೀಡಿದವರಿಗೆ ಅದನ್ನು ವಾಪಾಸ್ ಕೇಳುವ ಹಕ್ಕು ಇದೆ. ಹೈಕಮಾಂಡ್ ಇರು ಅಂದರೆ ಸಚಿವ ಸ್ಥಾನದಲ್ಲಿರುತ್ತೇನೆ. ಇಲ್ಲವಾದರೆ ನನ್ನ ಸ್ಥಾನ ಬಿಟ್ಟು ಕೊಡುತ್ತೇನೆ ಈ ವಿಷಯದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿಸಿದ್ರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv