– ಆಪರೇಷನ್ ಸಿಂಧೂರ ಯಶೋಗಾಥೆಯ ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗ
ನವದೆಹಲಿ: ಪಹಲ್ಗಾಮ್ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK) ದಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ಭಾರತ ನಡೆಸಿ ದಾಳಿಯ 3 ತಿಂಗಳ ಬಳಿಕ ವಾಯುಪಡೆಯ ಉಪ ಮುಖ್ಯಸ್ಥರು ʻಆಪರೇಷನ್ ಸಿಂಧೂರʼ (Operation Sindoor) ಎಕ್ಸ್‌ಕ್ಲೂಸಿವ್ ದೃಶ್ಯಗಳನ್ನ ಹಂಚಿಕೊಂಡಿದ್ದಾರೆ ಜೊತೆಗೆ, ಇದುವರೆಗೆ ಕೇಳಿರದ ಒಂದಷ್ಟು ಮಾಹಿತಿಗಳನ್ನ ಹಂಚಿಕೊಂಡರು.
ಖಾಸಗಿ ವಾಹಿನಿಯೊಂದರ ಕಾನ್‌ಕ್ಲೈವ್‌ನಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ, ಪಾಕಿಸ್ತಾನವನ್ನು ಕದನ ವಿರಾಮಕ್ಕೆ ತರಲು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ವಾಯುಪಡೆ (IAF) 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಐಎಎಫ್ ಹೆಚ್ಚಿನ ಸಂಖ್ಯೆಯ ಗುರಿಗಳನ್ನು ನಿಗದಿಪಡಿಸಿತ್ತು. ಅಂತಿಮವಾಗಿ ಪ್ರಮುಖ ತಾಣಗಳನ್ನು ಪಟ್ಟಿ ಮಾಡಿ 9ಕ್ಕೆ ಇಳಿಸಲಾಗಿತು. ಆದ್ರೆ 50 ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳಲ್ಲಿ, ಭಾರತೀಯ ರಕ್ಷಣಾ ಪಡೆಗಳು ಸಂಘರ್ಷ ನಿರ್ಮೂಲನೆ ಮಾಡಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು. ಹಿಂದೆಂದೂ ಈ ರೀತಿ ನಡೆದೇ ಇಲ್ಲ ಎಂಬುದೇ ನಮಗೆ ದೊಡ್ಡ ಸಾಧನೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್; ವಾಯುಪಡೆ ಮುಖ್ಯಸ್ಥ
ಮೊದಲು ನಾವು ಉಗ್ರರ ಅಡಗು ತಾಣಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದವು. ಆದ್ರೆ ಮೇ 9, 10ರ ರಾತ್ರಿ ಮುಖ್ಯ ದಾಳಿ ನಡೆಸಿದಾಗ ತೀಕ್ಷ್ಣ ಪ್ರತಿಕ್ರಿಯೆ ಕೊಡಲೇಬೇಕೆಂದು ನಿರ್ಧರಿಸಿದೆವು. ಹಾಗಾಗಿ ಪಾಕ್ ಮೇಲೆ ಪ್ಯಾನಲ್ ಫ್ರಂಟ್ ಅಟ್ಯಾಕ್ ಮಾಡಿದೆವು. ಪ್ರತಿಯೊಂದು ಶಸ್ತ್ರಾಸ್ತ್ರವನ್ನು ಗಣನೆಗೆ ತೆಗೆದುಕೊಂಡಿದ್ದೇವೆ. 1971ರ ಯುದ್ಧದ ಸಮಯದಲ್ಲೂ ಮಾದಲಾರದಂತಹ ದಾಳಿಯನ್ನ ನಾವು ಮಾಡಿದ್ದೇವೆ. ಪಾಕ್‌ನ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದೇವೆ. ಪಾಕಿಸ್ತಾನದ ಸಾಮರ್ಥ್ಯವನ್ನು ಬಹಿರಂಗಪಡಿಸುವುದು ಸಹ ಈ ದಾಳಿಯ ಹಿಂದಿನ ಉದ್ದೇಶವಾಗಿತ್ತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ನಡೆಸಿದ್ದು ಏಕೆ?
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಭಾರತೀಯ ರಕ್ಷಣಾ ಪಡೆಗಳು ಮೇ 7ರ ಬೆಳಗ್ಗಿನ ಜಾವ ಪಾಕ್ ಮತ್ತು ಪಿಒಕೆಯಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಆಪ್ತ ಸಹಾಯಕರು ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರಕ್ಕೆ ಜೈಶ್ ನೆಲೆಗಳು ಉಡೀಸ್ – ಪುನರ್ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ