ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ

Public TV
1 Min Read
IAF continues 3

ಡಿಸ್ಪುರ್: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ ಜನರನ್ನು ರಕ್ಷಿಸಲು ಭಾರತೀಯ ವಾಯುಪಡೆ(IAF) ಮುಂದಾಗಿದೆ. ಇಲ್ಲಿವರೆಗೂ ಐಎಎಫ್ 253ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಶೋಧ ಕಾರ್ಯವನ್ನು ಮುಂದುವರಿಸಿದೆ.

IAF continues 1

ಅಸ್ಸಾಂ ಮತ್ತು ಮೇಘಾಲಯದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಜೂನ್ 21 ರಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹದಿಂದ ಜನರನ್ನು ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಅಂದಿನಿಂದ, ಇಲ್ಲಿವರೆಗೂ ಐಎಎಫ್ ಸುಮಾರು 74 ಕಾರ್ಯಾಪಡೆಗಳನ್ನು ಕಳುಹಿಸಿದ್ದು, 253 ಜನರನ್ನು ರಕ್ಷಿಸಿದೆ. ಇದನ್ನೂ ಓದಿ: ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು

IAF continues

ಕಳೆದ 4 ದಿನಗಳಿಂದ ಅಸ್ಸಾಂ ಮತ್ತು ಮೇಘಾಲಯದ ಪ್ರವಾಹ ಪೀಡಿತ ಜನರಿಗೆ ಪರಿಹಾರವನ್ನು ಒದಗಿಸುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. 200 ಟನ್‍ಗಳಿಗಿಂತ ಹೆಚ್ಚು ಆಹಾರ ಮತ್ತು ಚಿಕಿತ್ಸೆಯ ಸಾಮಾಗ್ರಿಗಳನ್ನು ಈ ಪಡೆ ಹೊಂದಿದೆ. ವಿವಿಧ ಹೆಲಿಕಾಪ್ಟರ್ ಮತ್ತು ಸಾರಿಗೆ ವಿಮಾನಗಳನ್ನು ಬಳಸಿಕೊಂಡು 253 ಜನರನ್ನು ರಕ್ಷಿಸಲಾಗಿದೆ ಎಂದು ಟ್ವೀಟ್‌ ಮಾಡುವ ಮೂಲಕ ಐಎಎಫ್ ತಿಳಿಸಿದೆ.

ಹೇಗಿದೆ ಪ್ರವಾಹದ ಸ್ಥಿತಿ?
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಜನರ ಪ್ರಾಣಕ್ಕೆ ಕುತ್ತು ತಂದಿದ್ದು, ಸಾವಿನ ಸಂಖ್ಯೆ 118ಕ್ಕೆ ಏರಿದೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪಟ್ಟಣ ಸತತ ಆರನೇ ದಿನವೂ ಮುಳುಗಿದೆ. ಅಸ್ಸಾಂನ ಪ್ರವಾಹದಿಂದಾಗಿ 28 ಜಿಲ್ಲೆಗಳಲ್ಲಿ 33.03 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ದೊಡ್ಡ ವಿನಾಶಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ನ ಪಡೆ ಸಿಲ್ಚಾರ್ ಪಟ್ಟಣದಲ್ಲಿ ತಮ್ಮ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *