ಶ್ರೀನಗರ: ಕಾಂಗ್ರೆಸ್‌ನಿಂದ (Congress) ಬೇರ್ಪಟ್ಟ ನಂತರ ಸತತವಾಗಿ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad), ಗುಜರಾತ್ (Gujarat) ಮತ್ತು ಹಿಮಾಚಲ ಪ್ರದೇಶದ (Himachal Pradesh) ವಿಧಾನಸಭೆ ಚುನಾವಣೆಯಲ್ಲಿ (Assembly Polls) ಕಾಂಗ್ರೆಸ್ ಗೆಲ್ಲಲೆಂದು ನಾನು ಈಗಲೂ ಬಯಸುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶ್ರೀನಗರದಲ್ಲಿ ಮಾತನಾಡಿರುವ ಅವರು, ನಾನು ಕಾಂಗ್ರೆಸ್‌ನಿಂದ ಬೇರ್ಪಟ್ಟಿದ್ದರೂ ಎಂದೂ ಅದರ ಜಾತ್ಯತೀತ ಸಿದ್ಧಾಂತದ (Secularism) ವಿರುದ್ಧ ಇರಲಿಲ್ಲ. ಪಕ್ಷದ ವ್ಯವಸ್ಥೆ ದುರ್ಬಲವಾಗುತ್ತಿದ್ದರಿಂದ ನಾನು ಬೇರ್ಪಟ್ಟೆ ಅಷ್ಟೇ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಬೇಕೆಂದು ನಾನು ಬಯಸುತ್ತೇನೆ. ಅಲ್ಲಿ ಆಮ್ ಆದ್ಮಿ ಪಕ್ಷ (AAP) ಗೆಲ್ಲಲು ಸಾಧ್ಯವಿಲ್ಲ ಎಂದೂ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್ – ವಿಜಯಪುರದಿಂದ ಕೊಟ್ಟಾಯಂಗೆ ಹೊಸ ರೈಲು
ಎಎಪಿಯು ಕೇಂದ್ರಾಡಳಿತ ಪ್ರದೇಶ ದೆಹಲಿಯ (NewDelhi) ಪಕ್ಷ ಮಾತ್ರ. ಅವರು ಪಂಜಾಬ್ ಅನ್ನು ಸಮರ್ಥವಾಗಿ ನಡೆಸಲು ಸಾಧ್ಯವಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್ ಮಾತ್ರ ಸಾಧ್ಯ, ಏಕೆಂದರೆ ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್
ಗುಲಾಂ ನಬಿ ಆಜಾದ್ ಅವರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪನೆ ಮಾಡಿದ್ದರು. ಕಾಂಗ್ರೆಸ್‌ನ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದ ಅವರು ಇದೀಗ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಮಾತೃ ಪಕ್ಷದ ಪರ ಬ್ಯಾಟಿಂಗ್ ಮಾಡಿದ್ದಾರೆ.