ನವದೆಹಲಿ: ದೇಶದ ಸ್ವಾಮೀಜಿಗಳು ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜನರಿಗೆ ತಿಳಿಹೇಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹನುಮ ಜಯಂತಿಯಂದು ಗುಜರಾತಿನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ವಿದೇಶಿ ನಿರ್ಮಿತ ವಸ್ತುಗಳು ನಮಗೆ ಉತ್ತಮ ಎನಿಸಬಹುದು. ಆದರೆ ಅದು ನಮ್ಮ ಜನರ ಶ್ರಮಕ್ಕೆ ಪ್ರತೀಕವಾಗಿರುವುದಿಲ್ಲ. ನಮ್ಮ ಮಾತೃಭೂಮಿಯ ಸೊಗಡನ್ನು ಹೊಂದಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ತಾಯ್ನಾಡಲ್ಲಿ 108 ಅಡಿ ಎತ್ತರದ ಹನುಮ ಮೂರ್ತಿಯನ್ನು ಅನಾವರಣಗೊಳಿಸಿದ ಮೋದಿ
Advertisement
Advertisement
ದೇಶದ ಸ್ವಾಮೀಜಿಗಳು ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜನರಿಗೆ ತಿಳಿಹೇಳಬೇಕೆಂದು ನಾನು ವಿನಂತಿಸುತ್ತೇನೆ. ʼವೋಕಲ್ ಫಾರ್ ಲೋಕಲ್ʼ ಅಭಿಯಾನ ಪರಿಣಾಮಕಾರಿಯಾಗಬೇಕಿದೆ. ನಮ್ಮ ಜನರು ತಯಾರಿಸಿದ ವಸ್ತುಗಳನ್ನು ಮಾತ್ರ ಮನೆಗಳಲ್ಲಿ ಬಳಸಬೇಕು. ಹೀಗೆ ಮಾಡುವುದರಿಂದ ಅಪಾರ ಸಂಖ್ಯೆಯಲ್ಲಿ ಜನರು ಉದ್ಯೋಗ ಪಡೆದುಕೊಳ್ಳಲು ಸಫಲರಾಗುತ್ತಾರೆ ಎಂದು ತಿಳಿಸಿದರು.
Advertisement
ಭಾರತವು ಇಂದು ಸ್ಥಬ್ದವಾಗಿ ಉಳಿಯಲು ಸಾಧ್ಯವಿಲ್ಲ. ನಾವು ಇರುವಲ್ಲಿಯೇ ಉಳಿಯಲು ಸಾಧ್ಯವಿಲ್ಲ. ಜಾಗತಿಕ ಪರಿಸ್ಥಿತಿ ಹೇಗಿದೆ ಎಂದರೆ, ಇಡೀ ಜಗತ್ತು ‘ಆತ್ಮನಿರ್ಭರ್’ ಆಗುವುದು ಹೇಗೆ ಎಂದು ಯೋಚಿಸುತ್ತಿದೆ. ಭಾರತವು ಈ ಹಂತದಲ್ಲಿ ಸ್ಥಬ್ದವಾಗಿರದೇ, ಸ್ವಾವಲಂಬಿಯಾಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ‘ನಾನು ಪ್ರಧಾನಮಂತ್ರಿಗಳ ಖಾಸಗಿ ಕಾರ್ಯದರ್ಶಿ’ ಎಂದವನ ವಿರುದ್ಧ ದಾಖಲಾಯ್ತು ಎಫ್‍ಐಆರ್
Advertisement
ಮುಂದಿನ 25 ವರ್ಷಗಳಲ್ಲಿ ನಾವು ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಬಳಸಿದರೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.