ಮುಂಬೈ: ನಾನು ನನ್ನ ಕೆಲಸ ಮಾಡಲು ಇಲ್ಲಿದ್ದೇನೆ ಮತ್ತು ಅದನ್ನು ಮುಂದುವರೆಸುತ್ತೇನೆ, ನಿಲ್ಲಿಸುವುದಿಲ್ಲ. ಜನರನ್ನು ನಗಿಸುವುದು ನನ್ನ ಕೆಲಸ, ನಿಮಗೆ ಅದು ಹಾಸ್ಯವಾಗಿ ಕಾಣಿಸದಿದ್ದರೆ ನಗಬೇಡಿ ಎಂದು ಸ್ಟ್ಯಾಂಡ್‍ಅಪ್ ಕಾಮಿಡಿಯನ್(ವಿಡಂಬನಕಾರ) ವೀರ್ ದಾಸ್ ಹೇಳಿದ್ದಾರೆ.
ಕಳೆದ ವಾರವಷ್ಟೇ, ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ ಎಂಬ ವೀರ್ ದಾಸ್ ಅವರ ಆರು ನಿಮಿಷದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಭಾರತದಲ್ಲಿರುವ ಒಳ್ಳೆಯ ಮತ್ತು ಕೆಟ್ಟದ್ದರ ಕುರಿತಂತೆ ಮಾತನಾಡಿದ್ದರು. ಈ ವೀಡಿಯೋ ನೋಡಿ ಕೆಲವರು ಭಾರತಕ್ಕೆ ಅವಮಾನ ಮಾಡುತ್ತಿದ್ದರೆ ಎಂದು ಟೀಕಿಸಿದರೆ, ಮತ್ತೆ ಕೆಲವರು ಅವರ ಧೈರ್ಯಶಾಲಿ ಹೇಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು ಮತ್ತು ಅವರ ನಿಲುವಿಗೆ ಬೆಂಬಲ ನೀಡಿದ್ದರು.
Advertisement
Advertisement
ಏಕಪಾತ್ರಭಿನಯ ಬಗ್ಗೆ ಕುರಿತಂತೆ ವೀರ್ ದಾಸ್ ಅವರು, ನಾನು ಕೇವಲ ಶೋಗಳನ್ನು ನೀಡುತ್ತೇನೆ. ಅದು ನನ್ನ ಪ್ರೇಕ್ಷಕರಿಗಾಗಿ ಒಂದಷ್ಟು ತುಣುಕುಗಳನ್ನು ಬರೆದಿದ್ದೇನೆ. ನನ್ನನ್ನು ಕರೆಸಿ ಸಂಭಾಷಣೆ ನಡೆಸಬೇಕೆಂದು ನಾನು ಎಂದಿಗೂ ಬಯಸಿಲ್ಲ. ಹಾಗೇ ನಾನು ಭಾವಿಸುವುದು ಇಲ್ಲ. ನಾನು ಕೇವಲ ಜನರನ್ನು ಕೋಣೆಯಲ್ಲಿ ನಗಿಸಲು ಬಯಸುತ್ತೇನೆ. ನೀವು ಹಾಗೆಯೇ ಭಾವಿಸುತ್ತೀರಾ ಅಂದುಕೊಂಡಿದ್ದೇನೆ.
Advertisement
Advertisement
ನಾನು ಬಹಳ ಅದೃಷ್ಟವಂತ ಏಕೆಂದರೆ ನಾನು ಯಾವುದೇ ಸೆನ್ಸಾರ್‍ಶಿಪ್ ಅನ್ನು ಎದುರಿಸಬೆಕಾಗಿಲ್ಲ. “ನಾನು ಅದನ್ನು ಅನುಭವಿಸದೇ ಇರುವಷ್ಟು ಅದೃಷ್ಟಶಾಲಿಯಾಗಿದ್ದೇನೆ. ನಾನು ನೆಟ್‍ಫ್ಲಿಕ್ಸ್‍ನಲ್ಲಿ ಮೂರು ಸ್ಪೆಷಲ್ ಕಾಮಿಡಿಗಳನ್ನು ಮಾಡಿದ್ದೇನೆ ಮತ್ತು ನಮ್ಮ ಕಾರ್ಯಕ್ರಮದ ಏಕೈಕ ಉದ್ದೇಶ ‘ಜನರನ್ನು ನಗಿಸುವುದು ಮತ್ತು ಅದು ನನಗೆ ‘ಸರಿ’ ಎನಿಸುತ್ತದೆ ಎಂದಿದ್ದಾರೆ. ಜೊತೆಗೆ “ಜನರನ್ನು ನಗಿಸಲು ಮತ್ತು ಪ್ರೀತಿಯನ್ನು ಹರಡಲು ನಮಗೆ ಭಾರತದಲ್ಲಿ ಹೆಚ್ಚಿನ ಕಾಮಿಡಿ ಕ್ಲಬ್‍ಗಳ ಅಗತ್ಯವಿದೆ” ಎಂದು ವೀರ್ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ
ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ವೀರ್ ದಾಸ್ ಅವರು ಮಹಿಳೆಯನ್ನು ಗೌರವಿಸುವ, ರಾತ್ರಿಯಲ್ಲಿ ಮಹಿಳೆ ಮೇಲೆ ಅತ್ತಾಚಾರ ಮಾಡುವ ದೇಶದಿಂದ ನಾನು ಬಂದಿದ್ದೇನೆ. ಅಲ್ಲಿ ಮಾಸ್ಕ್ ಹಾಕಿಕೊಂಡು ಮಕ್ಕಳು ಕೈ ಮುಗಿಯುವಾಗ, ನಾಯಕರು ಮಾಸ್ಕ್ ಇಲ್ಲದೇ ಅಪ್ಪಿಕೊಳ್ಳುತ್ತಾರೆ. ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರದಿಂದ ಬಂದಿದ್ದೇನೆ. 75 ವರ್ಷದ ಮುದುಕರಿಂದ 150 ವರ್ಷದ ಹಳೆಯದಾದ ಐಡಿಯಾಗಳನ್ನು ಕೇಳಲಾಗುತ್ತದೆ ಎಂದು ಹೇಳಿದ್ದರು.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವೀರ್ ದಾಸ್ ಭಾರತಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಇವರಿಗೆ ರಾಜ್ಯದಲ್ಲಿ ಹಾಸ್ಯ ಪ್ರದರ್ಶನ ನೀಡಲು ಬಿಡಿಬಾರದು ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸದ್ದರು.