ಬಳ್ಳಾರಿ: ಇಂದಲ್ಲ ನಾಳೆ ನಮ್ಮ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. ಅಲ್ಲಿಯವರೆಗೂ ನಾನು ತಾಳ್ಮೆಯಿಂದ ಕಾಯುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು (B.Sriramulu), ಮುಖ್ಯಮಂತ್ರಿ ಕನಸು ಬಿಚ್ಚಿಟ್ಟಿದ್ದಾರೆ.
Advertisement
ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಎಸ್.ಟಿ ಸಮುದಾಯದ ನಾಯಕನನ್ನು ಪಕ್ಷ ಈ ಮಟ್ಟಕ್ಕೆ ಬೆಳೆಸಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸ್ಪರ್ಧಿಸಲು ಪಕ್ಷ ಅವಕಾಶ ಕೊಟ್ಟಿತ್ತು. ಇಂದಲ್ಲ ನಾಳೆ ಪಕ್ಷ ನನ್ನ ಸಾಧನೆಯನ್ನು ಗುರುತಿಸುತ್ತದೆ. ನಾನು ಮೋದಿ (Narendra Modi), ಅಮಿತ್ ಶಾಗೆ (Amit Shah) ಯಾಕೆ ಮೆಚ್ಚುಗೆಯಾಗಬಾರದು? ನನಗೆ ಅತಿಯಾದ ತಾಳ್ಮೆಯಿದೆ ಮುಖ್ಯಮಂತ್ರಿಯಾಗುವವರೆಗೂ ನಾನು ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ ಯಾರೇ ಬಂದ್ರೂ ನಾನು ಗೆದ್ದಾಗಿದೆ: ವರ್ತೂರು ಪ್ರಕಾಶ್
Advertisement
ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ನನಗೆ ಬಳ್ಳಾರಿ ಜಿಲ್ಲೆಯಿಂದಲೇ ಚುನಾವಣೆ ಎದುರಿಸಬೇಕು ಎಂಬ ಆಸೆ ಇದೆ. ಈ ಮೂಲಕ ಸಂಡೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆಯನ್ನು ಪರೋಕ್ಷವಾಗಿ ಹೇಳಿದ್ದಾರೆ.
Advertisement
Advertisement
ಈಗಾಗಲೇ ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ಬಳ್ಳಾರಿಯಿಂದ (Ballari) ಸ್ಪರ್ಧಿಸುವ ಕುರಿತು ತಿಳಿಸಿದ್ದೇನೆ. ಇನ್ನೂ ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಕಳೆದ ಬಾರಿ ಎರಡು ಕ್ಷೇತ್ರಗಳಿಂದ ಚುನಾವಣೆಗೆ ನಿಂತಿದ್ದೆ. ಆಗಿನ ಸಂದರ್ಭ ಹಾಗಿತ್ತು ಎಂದು ಹಿಂದಿನ ಚುನಾವಣೆಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಗುಬ್ಬಿಯಲ್ಲಿ ಶಾಸಕರು ಕೊಟ್ಟ ಕುಕ್ಕರ್ ಬ್ಲಾಸ್ಟ್ ಆಗುತ್ತಿವೆ: ಬಿ.ಎಸ್.ನಾಗರಾಜು
ಜನಾರ್ದನ ರೆಡ್ಡಿ (Janardhana Reddy) ನನ್ನ ಆತ್ಮೀಯ ಸ್ನೇಹಿತರು. ಅವರ ರಾಜಕೀಯ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜಕೀಯ ಬೇರೆ. ಸ್ನೇಹ ಬೇರೆ. ಹಿಂದೆ ಇದ್ದ ಸ್ನೇಹ ಬಾಂಧವ್ಯ ಈಗಲೂ ಇದೆ. ಅವರು ಒಬ್ಬ ಚತುರ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಅವರು ಬೇರೆ ಪಕ್ಷ ಕಟ್ಟುವಾಗ ನಾನು ಬೇಡ ಎಂದಿದ್ದೆ. ಆದರೂ ಅವರು ಪಕ್ಷ ಕಟ್ಟಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k