ಜೈಪುರ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ (Congress Presidential Election) ನಾಮಪತ್ರ ಸಲ್ಲಿಸುವುದಾಗಿ ರಾಜಸ್ಥಾನದ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಗುರುವಾರ ಖಚಿತಪಡಿಸಿದ್ದಾರೆ. ಆದರೆ ತಾವು ಎಂದಿಗೂ ರಾಜಸ್ಥಾನದಿಂದ ದೂರ ಉಳಿಯುವುದಿಲ್ಲ, ರಾಜ್ಯಕ್ಕಾಗಿಯೇ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ನಾಮಪತ್ರ ಸಲ್ಲಿಸುತ್ತೇನೆ, ಬಳಿಕ ಇತರ ಪ್ರಕ್ರಿಯೆಗಳು ನಡೆಯಲಿದೆ. ನಂತರ ಚುನಾವಣೆಯೂ ನಡೆಯಬಹುದು. ಇದೆಲ್ಲವೂ ಭವಿಷ್ಯದ ಮೇಲೆ ಅವಲಂಬಿತವಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದರು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ
Advertisement
Advertisement
ನಾನು ಸ್ಪಷ್ಟವಾಗಿ ಯಾರ ಬಗ್ಗೆಯೂ ಕಾಮೆಂಟ್ ಮಾಡಲು ಬಯಸುವುದಿಲ್ಲ. ರಾಜಸ್ಥಾನದಲ್ಲಿ ಯಾವ ಪರಿಸ್ಥಿತಿ ಎದುರಾಗುತ್ತದೆ, ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ರಾಜಸ್ಥಾನದ ಶಾಸಕರು ಏನು ಬಯಸುತ್ತಾರೆ ಎಂಬುದನ್ನು ನೋಡಬೇಕು. ಈ ಎಲ್ಲಾ ವಿಚಾರಗಳೂ ಚುನಾವಣೆಗೆ ಪರಿಣಾಮ ಬೀರುತ್ತದೆ ಎಂದರು. ಇದನ್ನೂ ಓದಿ: ಮೋದಿ ದೇಶದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಪಾಕ್ ಮಾಜಿ ಪ್ರಧಾನಿ
Advertisement
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನಾಂಕವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಲ್ಲಿ, ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.