ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ: ಹರ್ಷನ ತಾಯಿ

Public TV
1 Min Read
shivamogga case harsh mother

– ನಮ್ಮ ಮಗನ ಸಾವಿಗೆ ನ್ಯಾಯ ಸಿಗುವ ನಂಬಿಕೆ ಇಲ್ಲ
– ಆರೋಪಿಗಳಿಗೆ ಸೌಲಭ್ಯ ಕೊಟ್ಟ ಅಧಿಕಾರಿಗಳ ಅಮಾನತು ಮಾಡಬೇಕು

ಶಿವಮೊಗ್ಗ: ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ ಎಂದು ಹರ್ಷನ ತಾಯಿ ಪದ್ಮ ಆಕ್ರೋಶ ವ್ಯಕ್ತಪಡಿಸಿದರು.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹರ್ಷನ ಕೊಲೆ ಆರೋಪಿಗಳು ಮೊಬೈಲ್ ಬಳಕೆ ವಿಚಾರವಾಗಿ ಪದ್ಮ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಈ ಪ್ರಕರಣ ನೋಡಿದರೆ ನಮ್ಮ ಮಗನ ಸಾವಿಗೆ ನ್ಯಾಯ ಸಿಗುವ ನಂಬಿಕೆ ಇಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಆರೋಪಿಗಳಿಗೆ ಸೌಲಭ್ಯ ಕೊಟ್ಟ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

shivamogga case harsh mother 1

ಅಧಿಕಾರಿಗಳಿಂದ ಆರೋಪಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಾಗದಿದ್ದರೆ ನಮಗೆ ಒಪ್ಪಿಸಿ. ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ. ಆ ಮೂಲಕ ನಮ್ಮ ಮಗನ ಸಾವಿಗೆ ನ್ಯಾಯ ಪಡೆಯುತ್ತೇನೆ. ಹಿಂದುತ್ವ ಪರವಾಗಿ ಹೋರಾಡುವುದೇ ತಪ್ಪಾ? ಆರೋಪಿಗಳಿಗೆ ಜೈಲಿನಲ್ಲಿ ಈ ರೀತಿ ಸೌಲಭ್ಯ ನೋಡಿದರೆ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೈಲಿನಲ್ಲಿ ಮೊಬೈಲ್ ಬಳಸಿ ರೀಲ್ಸ್, ಟಿಕ್‍ಟಾಕ್ ಮಾಡಿದ ಹರ್ಷನ ಹಂತಕರು

shivamogga harsh case

ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೂ ಸರಿಯಿಲ್ಲ. ಇಂದಿಗೂ ಅಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಅಂಶ ಈ ಮೂಲಕ ಬಹಿರಂಗವಾಗಿದೆ. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳನ್ನು ಕೇವಲ ವರ್ಗಾವಣೆ ಮಾಡದೇ ಸೇವೆಯಿಂದಲೇ ಅಮಾನತು ಮಾಡಬೇಕು ಎಂದು ಹರ್ಷ ಕುಟುಂಬಸ್ಥರ ಆಗ್ರಹವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *