ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ತಿಳಿಸಿದರು.
Advertisement
ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ್ರು ಎಂತಹದ್ದನ್ನೆಲ್ಲಾ ಬಿಟ್ಟು ಹಾಕಿದ್ದಾರೆ. ಪ್ರಾದೇಶಿಕ ಪಕ್ಷ ಉಳ್ಕಳ್ಳಿ, ನಾವು ಯಾವತ್ತಾದರೂ ಉಪ್ಪಿನಕಾಯಿತರ ಉಪಯೋಗಕ್ಕೆ ಬರ್ತೀವಿ. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕುಮಾರಸ್ವಾಮಿ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ
Advertisement
Advertisement
ಸಿದ್ದರಾಮಯ್ಯ ಅವರು ಸ್ವಲ್ಪ ಕೂಲ್ ಆಗಲಿ, ನಾನೂ ಹೋಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ, ಮುಂದೆಯೂ ಚೆನ್ನಾಗಿರುತ್ತೆ. ನನಗೆ ಕೊನೆಯವರೆಗೂ ನಂಬಿಕೆಯಿದೆ. ಕೋಮುವಾದಿಗಳನ್ನು ದೂರವಿಡಬೇಕು ಅಂದ್ರೆ ನಾವೆಲ್ಲಾ ಒಗ್ಗಟ್ಟಾಗಬೇಕು. ಕೋಮುವಾದಿಗಳನ್ನು ದೂರವಿಡಲು ನಮಗೆ ಬೆಂಬಲ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಮರಿತಿಬ್ಬೇಗೌಡಗೆ ತಿರುಗೇಟು
ದಕ್ಷಿಣ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಎಂಬ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪಕ್ಷದಲ್ಲಿ ಎಲ್ಲ ಊಟ ಮಾಡಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಅಂದ್ರೆ ಹೇಗೆ ಉಪಸಭಾಪತಿ ಆಗಿದ್ದಾರೆ. ಎರಡು ಸಲ ಎಂಎಲ್‍ಸಿ ಮಾಡಿದ್ದೇವೆ ಇನ್ನೇನು ಮಾಡ್ಬೇಕು. ಹಾಗೇನಾದ್ರೂ ಇದ್ದರೆ ಓಪನ್ ಆಗಿ ಹೇಳಿ, ಹಿಂದೆ ಯಾಕೆ ಹೇಳ್ತಿರಿ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಯಚೂರು ಬಂದ್: ಕರ್ತವ್ಯಲೋಪ ಹಿನ್ನೆಲೆ ಜೂ.ಇಂಜಿನಿಯರ್ ವಜಾ
ಜೆಡಿಎಸ್ ನಿಂದ ನನಗೆ ಅನ್ಯಾಯವಾಗಿದೆ ಅಂತಾ ಹೇಳಿ ರಾಜೀನಾಮೆ ಕೊಡಲಿ. ನಂತರ ಓಪನ್ ಆಗಿ ಪ್ರಚಾರ ಮಾಡ್ಲಿ, ಕಾಂಗ್ರೆಸ್ ಸೇರಿ ಮತ್ತೆ ಗೆಲ್ಲಲಿ. ಅವರು ದೊಡ್ಡವರಿದ್ದಾರೆ, ಅನುಭವಿಗಳಿದ್ದಾರೆ. ಇಂತಹ ನಿಲುವಿಗೆ ಹೋಗಬಾರದಿತ್ತು ಎಂಬುದು ನನ್ನ ಭಾವನೆ. ನಿಮಗಾಗಿ ಕುಮಾರಸ್ವಾಮಿ ಏನೇನ್ ಮಾಡಿದ್ದಾರೆ ಅಂತ ಗೊತ್ತಿದೆ. ಅದೆಲ್ಲ ಯಾವಾತ್ತಾದರೂ ತಿರುಗು ಬಾಣವಾಗುತ್ತೆ, ಇದು ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.