ಹಾಸನ: ನಾನು ಬಾರ್ಬರ್ ಆಗಲಿಕ್ಕೂ ರೆಡಿ ಇದ್ದೇನೆ. ನನ್ನ ಮಗಳನ್ನು ರೈತಳನ್ನಾಗಿ ಮಾಡುವೆ. ನೀವೆಲ್ಲರೂ ಡಾಕ್ಟರ್ ಎಂಜಿನಿಯರ್ ಆಗುತ್ತೀನಿ ಅಂದುಕೊಳ್ಳಬೇಡಿ. ಬೇರೆ ಬೇರೆ ಕೆಲಸಗಳ ಬಗ್ಗೆ ಕಡೆಗಣಿಸಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಎಂಜಿನಿಯರ್, ಡಾಕ್ಟರ್, ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ರೀತಿಯ ಉದ್ಯೋಗಳಲ್ಲೂ ಉತ್ತಮ ಭವಿಷ್ಯವಿದೆ. ಎಲ್ಲರೂ ಉನ್ನತ ಹುದ್ದೆಗೆ ಸೇರಿದರೆ ಕೃಷಿ ಮಾಡುವವರು ಯಾರು? ಮುಂದಿನ ದಿನಗಳಲ್ಲಿ ಬಾರ್ಬರ್ ಗೂ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಹೇಳಿದ್ದಾರೆ.
Advertisement
Advertisement
ಇಂತಹ ಉದ್ಯೋಗ ಮೇಲೂ ಈ ಕೆಲಸ ಕೀಳು. ಇವರು ಇದೇ ಕೆಲಸ ಮಾಡಬೇಕಿಂದಿಲ್ಲ. ಅವರವರ ಕೆಲಸದಲ್ಲಿ ಯಶಸ್ಸಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನನ್ನ ಮಗಳನ್ನು ರೈತಳನ್ನಾಗಿ ಮಾಡುವೆ. ಹಾಸನದಲ್ಲಿ ನಾನು ಕರ್ತವ್ಯ ನಿರ್ವಹಿಸಿರುವುದು ಅತ್ಯಂತ ಸಂತಸ ತಂದಿದೆ. ಇಡೀ ರಾಜ್ಯದಲ್ಲಿ ನನ್ನಷ್ಟು ಸಂತೋಷವಾಗಿ ಕೆಲಸ ನಿರ್ವಹಿಸಿದ ಐಪಿಎಸ್ ಅಧಿಕಾರಿ ಇಲ್ಲ ಎಂದು ಸಂತಸ ವ್ಯಕ್ತಪಡಿಸದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.
Advertisement