ತುಮಕೂರು: ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ನನ್ನ ಹಣೆಬರಹವನ್ನು ಚೆನ್ನಾಗಿ ದೊಡ್ಡದಾಗಿ ಬರೀರಿ ಅಂತಾ ಕೊರಟಗೆರೆ ಮತದಾರರ ಬಳಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ್ಳೆ ಪೆನ್ ಕೊಡಿಸ್ತಿನಿ, ಒಳ್ಳೆ ಇಂಕ್ ಕೊಡಿಸ್ತಿನಿ. ಚೆನ್ನಾಗಿ, ದೊಡ್ಡದಾಗಿ ನನ್ನ ಹಣೆಬರಹ ಬರೀರಿ ಎಂದು ಕಳಕಳಿಯಿಂದ ಕೇಳಿಕೊಂಡಿದ್ದಾರೆ.
ಪರಮೇಶ್ವರ್ ಅವರು ಈ ಪರಿಯಾಗಿ ಕೇಳಿಕೊಂಡಿದ್ದು ಇದೇ ಮೊದಲು. ಅದೇ ರೀತಿ ತಾನು ಗೆದ್ದು ಬಂದರೆ ಕೋರಾ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ಯುವಕರಿಗೂ ಕೆಲಸ ಕೊಡಿಸ್ತಿನಿ ಎಂದು ವಾಗ್ದಾನ ಮಾಡಿದ್ದಾರೆ. ಒಂದು ವೇಳೆ ಫ್ಯಾಕ್ಟರಿ ಅವರು ಕೊರಟಗೆರೆ ಯುವಕರಿಗರ ಕೆಲಸ ಕೊಡದೆ ಇದ್ದರೆ ಜಾಗ ಖಾಲಿ ಮಾಡಿಸ್ತಿನಿ ಎಂದು ಹೇಳಿದ್ದಾರೆ.