ಮುಂಬೈ: ಬಹುಭಾಷಾ ನಟಿ ತಾಪ್ಸಿ ಪನ್ನು ಮಗು ಬೇಕು ಎಂದು ಎನಿಸಿದ್ದಾಗ ಮಾತ್ರ ಮದುವೆ ಆಗುತ್ತೇನೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ನಟಿ ತಾಪ್ಸಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂದರ್ಶಕ ಪ್ರಿಯಕರನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯದ ಬಗ್ಗೆ ತಾಪ್ಸಿ ಅವರನ್ನು ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಪ್ಸಿ, ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಗಾಸಿಪ್ ಮಾತ್ರವಲ್ಲದೇ ನನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸಕ್ತಿ ಹೊಂದಿರುವವರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನನಗೆ ಇನ್ನೂ ಮದುವೆಯಾಗಿಲ್ಲ. ನನಗೆ ಮಕ್ಕಳು ಬೇಕು ಎಂದು ಎನ್ನಿಸಿದಾಗ ಮಾತ್ರ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಆದರೆ ನಾನು ಪ್ರೀತಿಸುತ್ತಿರುವ ವ್ಯಕ್ತಿ ಎಲ್ಲರೂ ಅಂದುಕೊಂಡಂತೆ ನಟ ಅಥವಾ ಕ್ರಿಕೆಟರ್ ಅಲ್ಲ. ಅವರು ನನ್ನ ಸುತ್ತುಮುತ್ತಲೂ ಇಲ್ಲ. ನಾನು ಮದುವೆಯಾದರೆ ತುಂಬಾ ಸರಳವಾಗಿ ಆಗುತ್ತೇನೆ. ಅದ್ಧೂರಿಯಾಗಿ ಖರ್ಚು ಮಾಡಿ ಮದುವೆಯಾಗುವುದ್ದಕ್ಕೆ ನನಗೆ ಇಷ್ಟವಿಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರು ಮಾತ್ರ ನಮ್ಮ ಮದುವೆಯಲ್ಲಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.
ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿರುವ ತಾಪ್ಸಿಯವರು ಹುಡುಗನ ಹೆಸರು, ಯಾರು ಎಂಬುವುದನ್ನು ರಿವೀಲ್ ಮಾಡಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿದೆ. ಸದ್ಯಕ್ಕೆ ತಾಪ್ಸಿ `ತಡ್ಕಾ’, `ಶಾಂದ್‍ಕಿ ಆಂಖ್’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.